News Karnataka Kannada
Friday, May 03 2024
ಉದ್ಯೋಗ

ಕೃಷಿ ಇಲಾಖೆಯ 368 ಹುದ್ದೆಗಳಿಗೆ ಅಧಿಸೂಚನೆ ಶೀಘ್ರ

recruitment
Photo Credit : Wikipedia

ರಾಜ್ಯ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳು ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ ಹೊರಬೀಳಲಿದೆ. ಈ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸಲಿದೆ. ಒಟ್ಟು 300+68 (HK) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.

ಈ ಸದರಿ ಹುದ್ದೆಗಳಿಗೆ ಸರ್ಕಾರವು ಇತ್ತೀಚೆಗೆ ಜಾರಿ ಮಾಡಿರುವ ಆದೇಶಗಳ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಮೀಸಲಾತಿ ನಿಯಮಗಳಲ್ಲಿ ಬದಲಾವಣೆಗಳಾಗಿದ್ದು, ಅದರಂತೆ ಹುದ್ದೆಗಳ ವರ್ಗೀಕರಣವು ಪರಿಷ್ಕರಣೆ ಆಗಬೇಕಿರುತ್ತದೆ. ಪರಿಷ್ಕರಣೆ ನಂತರ ಪುನಃ ಮರು ಪ್ರಸ್ತಾವನೆ ಸಲ್ಲಿಸುವಂತೆ ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿಗಳು ಕೃಷಿ ಆಯುಕ್ತರಿಗೆ ಪತ್ರದ ಮುಖೇನ ತಿಳಿಸಿದ್ದಾರೆ. ಇವರಿಂದ ಮೀಸಲಾತಿ ವರ್ಗೀಕರಣ ಮರು ಪ್ರಸ್ತಾವನೆ ಸಲ್ಲಿಕೆ ಆಗುತ್ತಿದ್ದಂತೆ 300+68 (HK) ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಶೀಘ್ರವೇ ಬಿಡುಗಡೆ ಆಗಲಿದೆ.

ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೇಕಡ 85ರಷ್ಟು ಕೃಷಿ ಪದವೀಧರರು ಮತ್ತು ಉಳಿದ ಶೇಕಡ.15 ರಷ್ಟು ಹುದ್ದೆಗಳಿಗೆ ಬಿ.ಟೆಕ್ ಕೃಷಿ ಇಂಜಿನಿಯರಿಂಗ್ ಪಾಸ್‌ ಮಾಡಿದವರು ಅಥವಾ ಬಯೋಟೆಕ್ನಾಲಜಿ ಪದವೀಧರರು ಅರ್ಹರಿರುತ್ತಾರೆ. ಈ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ವೃಂದ ಮತ್ತು ಮೀಸಲಾತಿ ನಿಯಮಾನುಸಾರ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿ ಸಿದ್ಧಪಡಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ / ಜನ್ಮ ದಿನಾಂಕ ಅಂಕಪಟ್ಟಿ, ಆಧಾರ್ ಕಾರ್ಡ್‌, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕೃಷಿ ಪದವಿ / ಬಿ.ಟೆಕ್ ಕೃಷಿ ಇಂಜಿನಿಯರಿಂಗ್ / ಬಯೋಟೆಕ್ನಾಲಜಿ ಪದವಿ ಅಂಕಗಳು ಅಗತ್ಯವಾಗಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು