News Karnataka Kannada
Tuesday, May 07 2024
ಆರೋಗ್ಯ

ಚಳಿಗಾಲದಲ್ಲಿ ದೇಹ ಬೆಚ್ಚಗಿಡಲು ಸೂಕ್ತ ಉಡುಪುಗಳು ಯಾವುವು ?

Winter
Photo Credit : Pixabay

ವೆಂಬರ್ ತಿಂಗಳು ಬರುತ್ತಿದ್ದಂತೆಯೇ ಚಳಿ, ಗಾಳಿ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಜನ ಚಳಿಯಿಂದ ಬೆಚ್ಚಗಿರಲು ಶಾಲ್, ಟೋಪಿ, ಸ್ವೆಟರ್, ಪುಲ್‍ಓವರ್, ಸ್ವೆಟ್‍ಶರ್ಟ್‍ಗಳ ಮೊರೆಹೋಗಿರುತ್ತಾರೆ. ಅಲ್ಲದೇ ಚಳಿಗಾಲದಲ್ಲಿ ಎಂತಹ ಉಡುಪುಗಳನ್ನು ಧರಿಸಬೇಕು ಎಂಬುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಈ ಕುರಿತ ಒಂದಷ್ಟು ಮಾಹಿತಿ ಹೀಗಿದೆ. . .

ಪ್ರಿಂಟ್‌‌‌ಗಳು:
ಪ್ರಿಂಟೆಂಡ್ ಕಿತ್ತಳೆ ಬಣ್ಣದ ಡ್ರೆಸ್ ಧರಿಸುವುದು ಒಂದು ಉತ್ತಮವಾದ ಆಯ್ಕೆ. ಉಡುಪಿನ ಮೇಲೆ ಪ್ರಿಂಟ್ ಇರುವುದು ನಿಮ್ಮ ಕಿತ್ತಳೆ ಬಣ್ಣದ ಡ್ರೆಸ್‌‌‌‌ನ ಹೊಳಪನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ. ಬಣ್ಣಗಳ ಹೊಂದಾಣಿಕೆಯಾದ ಬಿಳಿ ಮತ್ತು ಕಿತ್ತಳೆ, ನೀಲಿ ಮತ್ತು ಕಿತ್ತಳೆ ಹಾಗೂ ಕಂದುಬಣ್ಣಗಳು ಉತ್ತಮ ಆಯ್ಕೆಗಳಾಗಿರುತ್ತದೆ. ಆದರೆ ಪ್ರಿಂಟ್‌‌‌‌ಗಳು ತುಂಬಾ ಹಳೆಯ ಕಾಲದ್ದಾಗಿರದಂತೆ ಎಚ್ಚರ ವಹಿಸಿ.

ಚಾಕೆಟ್ಸ್:
ನೀಲಿ, ಕಪ್ಪು, ಗ್ರೇ, ಬಿಳಿಯ ಬಣ್ಣದ ಜಾಕೇಟ್ ಗಳು ಚಳಿಗಾಲಕ್ಕೆ ಉತ್ತಮ ಉಡುಪು. ಪಾರ್ಕಸ್, ಏನಾರಕ್ಸ್, ಮಿಲಿಟರಿ ಸ್ಟೈಲ್, ಪಫರ್, ಬಾಂಬರ್ ಜಾಕೆಟ್ಸ್ ಗಳು ನಿಮ್ಮ ಟೈಟ್ ಪೆನ್ಸಿಲ್ ಫಿಟ್ ಪ್ಯಾಂಟುಗಳಿಗೆ ಅಥವಾ ಸ್ಕರ್ಟ್ ಗೆ ಹೊಂದಿಕೊಳ್ಳುವುದು. ಇದರಲ್ಲೇ ದೊರಕುವ ಕಕೂನ್ ಕೋಟ್ಸ್ ಮತ್ತು ಪ್ಯಾಂಟ್ ಕೋಟ್ಸ್ ಗಳೂ ಸಾಂಪ್ರದಾಯಿಕ ಜಾಕೆಟ್ ನೋಡಲು ಧರಿಸಲು ಚೆಂದವಾಗಿರುತ್ತದೆ.

ಟ್ರಿಂಚ್ ಕೋಟ್ಸ್:
ಗುಂಡಿ ಇರುವ ಟ್ರೆಂಟ್ ಕೋಟ್ಸ್ ಮತ್ತು ಬೆಲ್ಟ್ ಇತ್ತೀಚಿನ ಹೊಸ ಫ್ಯಾಷನ್ ಆಗಿದೆ. ಇದು ಚಳಿಗಾಲಕ್ಕೆ ಹೇಳಿ ಮಾಡಿಸಿದ ಉಡುಪುಗಳು. ಕಡು ವರ್ಣದ ಈ ಕೋಟುಗಳು ಪ್ಯಾಂಟು, ಸ್ಕರ್ಟ್ ಮೇಲೆ ಧರಿಸಿದರೆ ಚೆಂದ. ನೀಲಿ ಕೆಂಪು, ಹಸಿರು ಬಣ್ಣದ ಟ್ರಿಂಚ್ ಕೋಟ್ಸ್ ಇಂದಿನ ಟ್ರೆಂಡ್.

ಸ್ವೆಟರ್:
ತೆಳು ಬಣ್ಣದ ವಿನೆಕ್ ಉಳ್ಳ ಸ್ವೇಟರ್ ಚಳಿಗಾಲಕ್ಕೆ ಹೇಳಿ ಮಾಡಿಸಿದ ಉಡುಪು. ತೆಳುವಾದ ಕಾಟನ್ ಬಟ್ಟೆ ಧರಿಸಿ ಅದರ ಮೇಲೆ ಸ್ವೆಟರ್ ಹಾಕಿಕೊಳ್ಳಬಹುದು. ಟೀಶರ್ಟ್ ಒಳಗೆ ಹಾಕಿ ಮೇಲೆ ಸ್ವೇಟರ್ ಹಾಕುವುದಾದರೆ ಅರ್ಧ ತೋಳಿನ ಸ್ವೆಟರ್ ಹಾಕಿಕೊಳ್ಳಿ. ಚೆಕ್ಸ್ ಸ್ವೆಟರ್ ಗಳು ಮಾರುಕಟ್ಟೆಯಲ್ಲಿ ತೆಳುವರ್ಣದ ಬಣ್ಣಗಳಲ್ಲಿ ದೊರಕುತ್ತವೆ. ಬಟನ್ ಸ್ವೆಟರ್ ನಿಮ್ಮ ದೇಹದ ಮೈಮಾಟವನ್ನು ಎತ್ತಿ ತೋರಿಸುತ್ತದೆ ಎಂಬುದು ಮರೆಯಬೇಡಿ.

ಪೆನ್ಸಿಲ್ ಸ್ಕರ್ಟ್:
ಉಣ್ಣೆದಾರದಿಂದ ತಯಾರಿಸಿರುವ ಪೆನ್ಸಿಲ್ ಸ್ಕರ್ಟ್ಸ್ ತೆಳ್ಳಗಿನ ಮೈಕಟ್ಟು ಉಳ್ಳವರಿಗೆ ಚೆಂದ ಕಾಣುವುದು. ಗ್ರೇ ಕಲರ್, ಕಪ್ಪು ಸ್ಕರ್ಟ್ ಗಳು ದೊರೆಕುತ್ತವೆ.

ಜಾಮ್ & ಹನಿ ಬಾಯ್ಸ್ ಸ್ವೆಟರ್:
ಸ್ಲೀವ್ಸ್ ಇಲ್ಲದ ಈ ಸ್ವೆಟರ್ ಕುತ್ತಿಗೆ ಪೂರ್ತಿ ಬರುತ್ತದೆ. ಸಾಮಾನ್ಯವಾಗಿ ಬ್ಲಾಕ್ ಕಲರ್ ಉಡುಪು ಚೆನ್ನಾಗಿಯೇ ಕಾಣಿಸುತ್ತದೆ. ಸದ್ಯ ಈ ಸ್ವೆಟರ್ ಕೂಡ ಬ್ಲಾಕ್ ಕಲರ್ ಆಗಿದ್ದು, ಮದ್ಯದಲ್ಲಿ ಬಿಳಿ ಬಣ್ಣದ ಸ್ಟಾರ್ ಡಿಸೈನ್ ಎದ್ದು ಕಾಣುತ್ತದೆ. ವಿಷೇಶವೆಂದರೆ ಈ ಸ್ವೆಟರ್ ಅನ್ನು ಯಾವುದೇ ಶರ್ಟ್ ಮೇಲೆ ಬೇಕಾದರೂ ಧರಿಸಬಹುದಾಗಿದೆ.

ವುಮೆನ್ಸ್ ಬ್ಲಾಕ್ ಪಾರ್ಕ್ ಜಾಕೆಟ್
ಮುಂಭಾಗ ಜಿಪ್ ಮತ್ತು ಬಟನ್‍ಗಳೊಂದಿಗೆ, ದೊಡ್ಡ ಜೇಬಿಗಳಿರುವ ಈ ಜಾಕೆಟ್ ನಿಮ್ಮನ್ನು ಬೆಚ್ಚಗಿರಿಸುವುದರ ಜೊತೆಗೆ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಫ್ಯಾಶನ್ ಲುಕ್ ನೀಡುವ ಈ ಜಾಕೆಟ್ ಉಷ್ಣಾಂಶವನ್ನು ಹೆಚ್ಚಾಗಿಸುತ್ತದೆ. ಈ ಜಾಕೆಟ್ ಅನ್ನು ಜೀನ್ಸ್ ಜೊತೆಗೆ ಶೂಗಳೊಂದಿಗೆ ಧರಿಸುವುದರಿಂದ ಬೆಸ್ಟ್ ಎಂದೇ ಹೇಳಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು