News Karnataka Kannada
Monday, May 06 2024
ಬೆಂಗಳೂರು ನಗರ

ಬೆಂಗಳೂರು: ಯಶಸ್ವಿ ಲಿವರ್ ಕಸಿ ನಡೆಸಿ ರೋಗಿಯ ಬದುಕಿನಲ್ಲಿ ನಗು ಮೂಡಿಸಿದ ಟ್ರಸ್ಟ್ ವೆಲ್

Bengaluru: Trust Well, which successfully performed a liver transplant, brought smiles in a patient's life
Photo Credit : News Kannada

ಬೆಂಗಳೂರು, ಮಾ.21: 73 ವರ್ಷದ ಮುಂಬೈನ ಯೋಗೇಶ್ (ಹೆಸರು ಬದಲಾಯಿಸಲಾಗಿದೆ) ಅವರು ಲಿವರ್ ಸಿರೋಸಿಸ್ ನೊಂದಿಗೆ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇವರಿಗೆ ಯಕೃತ್ತಿನ ಕಸಿ ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಯಿರಲಿಲ್ಲ. ಬೆಂಗಳೂರಿನ ಟ್ರಸ್ಟ್ ವೆಲ್ ಆಸ್ಪತ್ರೆಯ ಕಸಿ ಶಸ್ತ್ರಚಿಕಿತ್ಸಕರು, ಕಸಿ ಅರಿವಳಿಕೆ ತಜ್ಞರು ರೋಗಿಯನ್ನು ಬದುಕಿಸಲು ಸಂಕೀರ್ಣವಾದ ಯಕೃತ್ತಿನ ಕಸಿ ಮಾಡಿ ಇವರ ಬದುಕಿನಲ್ಲಿ ನೆಮ್ಮದಿಯ ನಗು ಮೂಡಿಸಿದರು.

ಯೋಗೇಶ್ ಅವರನ್ನು ಮೊದಲು ಹಿರಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಹೆಪಟೊಲೊಜಿಸ್ಟ್ ಅವರಿಗೆ ತೋರಿಸಲಾಯಿತು. ಅವರು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ತಕ್ಷಣವೇ ಟ್ರಾನ್ಸ್ ಆರ್ಟಿರಿಯಲ್ ಕೀಮೋ-ಎಂಬೋಲೈಸೇಶನ್ ಗೆ ಒಳಗಾಗಲು ತಿಳಿಸಿದರು. ಅದು ಅಲ್ಲದೇ ಯಕೃತ್ತಿನ ಕಸಿ ಮಾಡುವುದು ಕೂಡ ಅವಶ್ಯಕವಾಗಿತ್ತು. ಆದರೆ ಯೋಗೇಶ್ ಅವರು ಮಧುಮೇಹ ಹಾಗೂ ಸ್ಟೆಂಟ್ ಪ್ಲೇಸ್ ಮೆಂಟ್ ನೊಂದಿಗೆ ಪರಿಧಮನಿಯ ಆಂಜಿಯೋಗ್ರಫಿಗೆ ಒಳಗಾಗಿದ್ದರು. ಈ ಎಲ್ಲಾ ಕಾರಣದಿಂದಾಗಿ ಇವರಿಗೆ ಯಕೃತ್ತಿನ ಕಸಿ ಮಾಡುವುದು ಕೂಡ ತೀರಾ ಸವಾಲಿನ ಕೆಲಸವಾಗಿತ್ತು.

ಈ ಎಲ್ಲಾ ಸವಾಲಿನ ನಡುವೆ ಮಾರ್ಚ್ 7ರಂದು ಮುಂಜಾನೆ ವೈದ್ಯರ ತಂಡವು 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಕಸಿ ಶಸ್ತ್ರಚಿಕಿತ್ಸೆಯ ನಂತರ ಯೋಗೇಶ್ ಅವರಿಗೆ ಕಸಿ ಐಸಿಯು ನಲ್ಲಿ ಸರಿಯಾದ  ಫಿಸಿಯೋಥೆರಪಿ ನೀಡಿ 6 ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು.

ಡಾ.ರವಿಮೋಹನ್ಕ, ಡಾ.ಸುನೀಲ್ ಶೇನ್ವಿ, ಡಾ.ಮನೀಶ್ ಜೋಶಿ, ಡಾ.ಮಿಚುವಲ್, ಡಾ.ಮಾಧವಿ, ಡಾ.ಅಮೇಯ ಮತ್ತು ಡಾ.ಎನ್.ಎಸ್.ಚಂದ್ರಶೇಖರ್ ವೈದ್ಯಕೀಯ ತಜ್ಞರು ಈ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿ ಯೋಗೇಶ್ ಬದುಕಿನಲ್ಲಿ ಹೊಸ ಭರವಸೆ ತುಂಬಿದರು. ಜೊತೆಗೆ ಶಸ್ತ್ರಚಿಕಿತ್ಸೆ ಹಾಗೂ ಗುಣಮುಖ ಹೊಂದುವ ಸಮಯದಲ್ಲಿ ರೋಗಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ಅಪಾಯವನ್ನು ತಪ್ಪಿಸಲು ದಾದಿಯರು ಮತ್ತು ಕಸಿ  ಐಸಿಯುಸಿಬ್ಬಂದಿಯ ತಂಡದವರು ಸಂಪೂರ್ಣವಾದ ಬೆಂಬಲವನ್ನು ನೀಡಿದರು.

ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದಕ್ಕೆ *ಖುಷಿಪಟ್ಟ ಟ್ರಸ್ಟ್ ವೆಲ್ ಆಸ್ಪತ್ರೆಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರಾದ ಡಾ ಎಚ್ ವಿ ಮಧುಸೂದನ್ ಸಂತಸ ವ್ಯಕ್ತಪಡಿಸಿದ್ದಾರೆ.

*”ಇದು ನಮ್ಮ ಶಸ್ತ್ರಚಿಕಿತ್ಸಕ ತಂಡದ ಕೌಶಲ್ಯ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಸಾಧನೆಯ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ ಮತ್ತು ನಮ್ಮ ಎಲ್ಲಾ ರೋಗಿಗಳಿಗೆ ಅತ್ಯುನ್ನತ ಮಟ್ಟದ ಆರೈಕೆಯನ್ನು ಒದಗಿಸುತ್ತೇವೆ” ಎಂದು ಹೇಳಿದರು.

ಯಕೃತ್ತಿನ ಕಸಿ  ಜೀವ ಉಳಿಸುವ ವಿಧಾನವಾಗಿದ್ದು, ಇದು ರೋಗಿಗಳಿಗೆ ಹೊಸ ಜೀವನ ಕಟ್ಟಿಕೊಟ್ಟಂತೆ ಆಗುತ್ತದೆ. ಯಶಸ್ವಿ ಫಲಿತಾಂಶಕ್ಕೆ ನುರಿತ ವೈದ್ಯರ ತಂಡದ ಅಗತ್ಯವಿದೆ. ಟ್ರಸ್ಟ್ ವೆಲ್ ಆಸ್ಪತ್ರೆ ತಂಡ   ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಟ್ರಸ್ಟ್ ವೆಲ್ ಆಸ್ಪತ್ರೆ ಕುರಿತು:

ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಟ್ರಸ್ಟ್ ವೆಲ್ ಆಸ್ಪತ್ರೆ 250 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಹೊಂದಿದೆ. ಇದು ನರವಿಜ್ಞಾನ, ಮೂಳೆಚಿಕಿತ್ಸೆ, ಮೂತ್ರಶಾಸ್ತ್ರ, ಇಎನ್‌ಟಿ, ಹೃದ್ರೋಗ, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ, ಪಲ್ಮನರಿ ಮೆಡಿಸಿನ್, ಮಲ್ಟಿಆರ್ಗಾನ್ ಟ್ರಾನ್ಸ್ಪ್ಲಾಂಟ್ ಮತ್ತು ಎಮರ್ಜೆನ್ಸಿ ಕೇರ್ ಕ್ಷೇತ್ರದಲ್ಲಿನ ಶ್ರೇಷ್ಠತೆಯ ಕೇಂದ್ರವಾಗಿದೆ.

3 ಟೆಸ್ಲಾ ಇಂಟ್ರಾ ಆಪರೇಟಿವ್ ಎಂಆರ್ ಐ, 128 ಸ್ಲೈಸ್ ಸಿಟಿ, ರೊಬೊಟಿಕ್ ಸರ್ಜರೀಸ್,  ಡಿಜಿಟಲ್ ಎಕ್ಸ್ ರೇ ಮತ್ತು ಮೈಕ್ರೋ ಡೆಂಟಿಸ್ಟ್ರಿಯಂತಹ ಸಲಕರಣೆಗಳ ವಿಷಯಕ್ಕೆ ಬಂದಾಗ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಆಸ್ಪತ್ರೆಯು ಹೆಪಾ ಫಿಲ್ಟರ್ ಗಳು, ಡಯಾಲಿಸಿಸ್ ಸೆಂಟರ್, ಲೇಬರ್ ಓಟಿ, ಐವಿಎಫ್ ಸೆಂಟರ್ ಇತ್ಯಾದಿಗಳೊಂದಿಗೆ 8 ಪ್ರಮುಖ ಆಪರೇಷನ್ ಥಿಯೇಟರ್ ಗಳನ್ನು ಹೊಂದಿದೆ. ಆಸ್ಪತ್ರೆಗಳು ರೋಗಿಗಳ ಅಗತ್ಯಗಳನ್ನು ನೋಡಿಕೊಳ್ಳಲು ಸುಮಾರು 50 ICU ಹಾಸಿಗೆಗಳನ್ನು MICU, CICU, SICU, NICU ಮತ್ತು PICU ಹೊಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು