News Karnataka Kannada
Friday, May 17 2024
ಆರೋಗ್ಯ

ಯೋಗಾಸನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು

Yoga
Photo Credit : Wikipedia

ಯೋಗಾಸನಗಳ ನಿಯಮಿತ ಅಭ್ಯಾಸ ಮತ್ತು ಸರಿಯಾದ ಅಭ್ಯಾಸ ದೇಹಕ್ಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಯಾವೆಲ್ಲಾ ಅಂಶಗಳನ್ನು ಯೋಗದಲ್ಲಿ ಪಾಲಿಸಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. . .

ಯೋಗದ ಅಭ್ಯಾಸಗಳನ್ನು ಚೆನ್ನಾಗಿ ಗಾಳಿ ಇರುವ ಕೋಣೆಯಲ್ಲಿ ಮಾಡಬೇಕು, ಯೋಗ ಮ್ಯಾಟ್‌ ಹಾಸಿಕೊಳ್ಳಲು ಮರೆಯದಿರಿ.ಬಾಯಿ, ಮುಖವನ್ನು ತೊಳೆದುಕೊಂಡು ಯೋಗ ಮಾಡುವುದು ಒಳ್ಳೆಯದು. ಅದೂ ಅಲ್ಲದೆ ಯೋಗಾಭ್ಯಾಸವಾದ ತಕ್ಷಣ ಸ್ನಾನ ಮಾಡುವುದು ಒಳ್ಳೆಯದಲ್ಲ.

ಯೋಗಾಭ್ಯಾಸಗಳನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಯಾವುದೇ ದ್ರವವನ್ನು ಸೇವಿಸಿದ ನಂತರ, ಅಭ್ಯಾಸವನ್ನು ಪ್ರಾರಂಭಿಸುವ ಮೊದಲು ಅರ್ಧ ಘಂಟೆಯವರೆಗೆ ಕಾಯಿರಿ. ಲಘು ಆಹಾರವನ್ನು ತೆಗೆದುಕೊಂಡರೆ, 1-2 ಗಂಟೆಗಳ ಕಾಲ ಕಾಯಿರಿ. ಪೂರ್ಣ ಊಟವನ್ನು ತೆಗೆದುಕೊಂಡರೆ, 3-4 ಗಂಟೆಗಳ ಕಾಲ ನಂತರ ಯೋಗಾಭ್ಯಾಸ ಮಾಡಿ.

ಯೋಗಾಭ್ಯಾಸವನ್ನು ಪ್ರಾರಂಭಿಸಲು ಸೂಕ್ತವಾದ ಮಾರ್ಗವೆಂದರೆ ನೆಲದ ಮೇಲೆ ಮ್ಯಾಟ್‌ನ್ನು ಹರಡಿ, ಬೆಳಿಗ್ಗೆ ಪೂರ್ವ ಅಥವಾ ಉತ್ತರಕ್ಕೆ ಮತ್ತು ಸಂಜೆ ಪಶ್ಚಿಮ ಅಥವಾ ಉತ್ತರಕ್ಕೆ ಎದುರಾಗಿ ಯೋಗವನ್ನು ಮಾಡಬೇಕು.

ಯೋಗದಲ್ಲಿ ಪ್ರಾಣಾಯಾಮ ಅತಿ ಮುಖ್ಯವಾಗಿರಬೇಕು. ಅದೇ ರೀತಿ ಆದಷ್ಟು ಸಡಿಲವಾದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು.
ಯೋಗ ಮಾಡುವಾಗ ಮುಖ್ಯವಾಗಿ ಉಸಿರಾಟದೆಡೆಗೆ ಗಮನವಹಿಸಬೇಕು. ದೇಹದ ಚಲನೆಯ ಜೊತೆಗೆ ಉಸಿರಿನೆಡೆಗೆ ಗಮನ ನೀಡಿದಾಗ ಪೂರ್ತಿ ದೇಹದೆಡೆಗೆ ಲಕ್ಷ್ಯ ನೀಡಿದಂತಾಗುತ್ತದೆ. ಹಾಗೆಂದು ದೈಹಿಕ ಚಲನೆಯನ್ನು ನಿಲ್ಲಿಸಬೇಡಿ. ಎರಡನ್ನೂ ಬ್ಯಾಲೆನ್ಸ್ ಮಾಡಿ. ದೀರ್ಘವಾದ ಉಸಿರಾಟ ಯೋಗಕ್ಕೆ ಮುಖ್ಯವಾಗಿದೆ.

ಯೋಗಾಸನ ಮಾಡುವಾಗ ಒಂದು ಭಂಗಿಯಿಂದ ಇನ್ನೊಂದು ಭಂಗಿಗೆ ಮುಂದುವರೆಯುವ ಬಗ್ಗೆ ತಿಳಿದಿರಬೇಕು. ಅದೇ ರೀತಿ ಒಂದು ದಿನ ಹೆಚ್ಚು ಹೊತ್ತು, ಇನ್ನೊಂದು ದಿನ ಕಡಿಮೆ ಸಮಯ ಯೋಗಾಸನ ಮಾಡುವುದು ಒಳ್ಳೆಯದಲ್ಲ.

ಪ್ರತೀ ಆಸನವನ್ನು ಮಾಡಿ ಮುಗಿಸಿದ ಬಳಿಕ ಕೊಂಚ ವಿಶ್ರಾಂತಿ ತೆಗೆದುಕೊಂಡು ಮುಂದಿನ ಆಸನಕ್ಕೆ ತೆರಳಿ. ಇದರಿಂದ ದೇಹಕ್ಕೆ ಹೆಚ್ಚು ಶ್ರಮವಾಗುವುದಿಲ್ಲ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು