News Karnataka Kannada
Tuesday, May 07 2024
ಬಿಹಾರ

ಬಿಹಾರ: ಒಂದೇ ಕುಟುಂಬದ 6 ಮಂದಿ ವಿಷ ಸೇವಿಸಿ 5 ಜನ ಸಾವು!

Ullal: Man commits suicide by pouring petrol
Photo Credit : Freepik

ಬಿಹಾರ: ನವಾಡದ ನಗರ ಪೊಲೀಸ್ ಠಾಣೆಯ ಹೊಸ ಬಡಾವಣೆಯಲ್ಲಿ ಒಂದೇ ಕುಟುಂಬದ 6 ಮಂದಿ ಒಟ್ಟಿಗೆ ವಿಷ ಸೇವಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಇದರಲ್ಲಿ 5 ಮಂದಿ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಎಲ್ಲರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬುಧವಾರ ತಡರಾತ್ರಿ ಕುಟುಂಬದ ಮುಖ್ಯಸ್ಥ ಕೇದಾರ್‌ ಲಾಲ್ ಗುಪ್ತಾ ತನ್ನ ಪತ್ನಿ ಮತ್ತು 4 ಮಕ್ಕಳೊಂದಿಗೆ ವಿಷ ಸೇವಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದರಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಕೇದರ್‌ಲಾಲ್ ಗುಪ್ತಾ, ಅವರ ಪತ್ನಿ ಅನಿತಾ ಕುಮಾರಿ ಮತ್ತು ಮೂವರು ಮಕ್ಕಳಾದ ಪ್ರಿನ್ಸ್ ಕುಮಾರ್, ಶಬನಮ್ ಕುಮಾರಿ ಮತ್ತು ಗುಡಿಯಾ ಕುಮಾರಿ ಸೇರಿದ್ದಾರೆ. ಇನ್ನು ಕಿರಿಯ ಪುತ್ರಿ ಸಾಕ್ಷಿ ಸ್ಥಿತಿ ಚಿಂತಾಜನಕವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು