News Karnataka Kannada
Tuesday, April 30 2024
ಆರೋಗ್ಯ

ದೇಹದ ತೂಕ ಕಾಪಾಡಿಕೊಳ್ಳುವುದು ಹೇಗೆ

How to maintain body weight
Photo Credit : Pixabay

ಮೊದಲನೆಯದಾಗಿ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮುಖ್ಯವಾಗಿರುವುದು ನಾವು ತಿನ್ನುವ ಆಹಾರ ಅಥವಾ ನಾವು ಪಾಲಿಸುವ ಡಯಟ್ ಹಾಗೂ ದಿನ ನಿತ್ಯ ಮಾಡು ವ್ಯಾಯಾಮ.

ನಮ್ಮ ದೇಹಕ್ಕೆ ಡಯಟ್ ೮೦% ಇದ್ದರೆ ವ್ಯಾಯಾಮ ೨೦% ಇರಬೇಕು.ಇದರ ಜೊತೆಗೆ ಸರಿಯಾದ ನ್ಯೂಟ್ರೀಶಿನ್ ಇದ್ದರೆ ನಮ್ಮ ದೇಹದ ತೂಕವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಎಂದು ಆಯುರ್ವೇದಿಕ್ ವೆಲ್‌ನೆಸ್ ಕ್ಲಿನಿಕ್‌ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ಆಹಾರ. ವ್ಯಾಯಾಮ, ಸ್ಟೆçಸ್ ಮ್ಯಾನೆಜ್, ನ್ಯೂಟ್ರೀಶಿನ್ ಈ ನಾಲ್ಕು ತೂಕವನ್ನು ಸಮತೋಲನವಾಗಿ ಇರಿಸುವ ಮುಖ್ಯ ಪಿಲ್ಲರ್‌ಗಳು ಎಂದರೂ ತಪ್ಪಾಗಲಾರದು.

ಆಹಾರದಲ್ಲಿ ಬೇರೆ ಬೇರೆ ರೀತಿಯ ಡಯಟ್‌ಗಳಿವೆ ಎಲ್ಲರಿಗೂ ಒಂದೇ ಡಯಟ್ ಸರಿಹೋಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.
ನಮ್ಮ ದೇಹದಲ್ಲಿ ಸಕ್ಕರೆ ಅಂಶ ನಮ್ಮ ದೇಹಕ್ಕೆ ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದ ಸಕ್ಕರೆಯನ್ನು ದೇಹಕ್ಕೆ ಸೇರಿಸುವುದು ಉತ್ತಮ.

ನಮ್ಮ ಆಹಾರದಲ್ಲಿ ಹೆಚ್ಚಾಗಿ ಅನ್ನವನ್ನು ಸೇವನೆ ಮಾಡುತ್ತೇವೆ. ಹಿಂದಿನ ಕಾಲದಲ್ಲೂ ಅಷ್ಟೇ ಹೆಚ್ಚು ಅನ್ನ ಸ್ವಲ್ಪವೇ ತರಕಾರಿ ಬಳಸಿ ಆಹಾರವನ್ನು ಸೇವನೆ ಮಾಡುತ್ತಿದ್ದರು. ಅವರು ಎಷ್ಟು ಅನ್ನ ಸೇವನೆ ಮಾಡುತ್ತಾರೋ ಅಷ್ಟನ್ನು ಜೀರ್ಣಿಸಿಕೊಳ್ಳುವ ಶಕ್ತಿ ಅವರಲ್ಲಿತ್ತು ಹಾಗೂ ದೇಹವನ್ನು ಕೂಡ ಅಷ್ಟೇ ದಂಡಿಸುತ್ತಿದ್ದರು. ಆದರೆ ಈಗ ಹೆಚ್ಚಿನ ಕೆಲಸಗಳೆಲ್ಲಾ ಕೂತಲ್ಲೆ ಮಾಡುವುದರಿಂದ ದೈಹಿಕ ಶ್ರಮ ಕಡಿಮೆಯಾಗಿದೆ.

ಹೀಗಾಗಿ ನಮ್ಮ ಕೆಲಸಕ್ಕೆ ಸರಿಯಾಗಿ ನಾವು ಕಾರ್ಬೋಹೈಡ್ರೆಟ್ಸ್ಅನ್ನು ಸರಿ ಹೊಂದಿಸಬೇಕಾಗುತ್ತದೆ. ಇನ್ನೊಂದು ಮುಖ್ಯವಾಗಿ ಸಕ್ಕರೆಯ ಅಂಶ ಅನ್ನದ ಮೂಲಕ ನಮ್ಮ ದೇಹಕ್ಕೆ ಸಕ್ಕರೆಯ ಅಂಶ ಸೇರುತ್ತಿದೆ. ಜೊತೆಗೆ ಸಿಹಿ ತಿಂಡಿ, ಹಾಗೂ ಜಂಕ್ ಫುಡ್ ಸೇವಿಸುವುದು ಕೂಡ ಸಕ್ಕರೆಯ ಅಂಶವನ್ನು ಹೆಚ್ಚಿಗೆ ಮಾಡುತ್ತದೆ.

ಇನ್ನು ಕೆಲವೊಮ್ಮೆ ಬೆಳಗ್ಗೆ ಎದ್ದ ಕೂಡಲೆ ಹಣ್ಣು, ನಟ್ಸ್, ಡ್ರೈ ಫ್ರೂಟ್ಸ್ ಳನ್ನು ಸೇವಿಸುವುದು, ನೀರು ಕುಡಿಯುವುದು. ಮತ್ತೆ ಬೆಳಗ್ಗಿನ ಉಪಹಾರ, ಮಧ್ಯಾನ ಊಟ ಸಜೆ ತಿಂಡಿ ಹಾಗೂ ರಾತ್ರಿ ಊಟ ಈ ರೀತಿಯಾಗಿ ಆಹಾರ ಸೇವಿಸುವ ಬದಲು ಕೇವಲ ಮೂರು ಹೋತ್ತು ಸರಿಯಾದ ಪೋಷಕಾಂಶವುಳ್ಳ ಆಹಾರ ಸೇವಿಸುವುದು ಉತ್ತಮ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು