News Karnataka Kannada
Friday, May 03 2024
ವಿಶೇಷ

ಒಂದೊಳ್ಳೆಯ ಆಹಾರ ಕ್ರಮದಿಂದ ಮಲಬದ್ಧತೆ ದೂರಮಾಡಿ

Get rid of constipation with a good diet
Photo Credit : By Author

ನಮ್ಮ ಆಹಾರ ಕ್ರಮಗಳು ಬದಲಾಗಿವೆ. ಪಾಶ್ಚಿಮಾತ್ಯರ ಆಹಾರ ಕ್ರಮ ಜತೆಗೆ ಶಿಸ್ತುಬದ್ಧವಲ್ಲದ ಜೀವನ ಕ್ರಮವನ್ನು ಅನುಸರಿಸುತ್ತಿರುವುದರಿಂದ ಎಲ್ಲೋ ಒಂದು ಕಡೆ ನಮಗೆ ಗೊತ್ತಿಲ್ಲದಂತೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅದರಲ್ಲಿ ಮಲಬದ್ಧತೆಯೂ ಒಂದಾಗಿದೆ.

ಮಲಬದ್ಧತೆಯ ಸಮಸ್ಯೆಯಿಂದ ಹೆಚ್ಚಿನ ಜನರು ಬಳಲುತ್ತಿದ್ದಾರೆ. ಇದಕ್ಕೆ ಅವರ ಆಹಾರ ಕ್ರಮಗಳಲ್ಲಿ ಶಿಸ್ತು ಇಲ್ಲದಿರುವುದು ಮತ್ತು ಯಾವ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಅರಿಯದೆ ಬಾಯಿಚಪಲಕ್ಕೆ ಸಿಕ್ಕಿದ್ದೆಲ್ಲವನ್ನು ಸೇವಿಸುವುದು ಮತ್ತು ಮಲಬದ್ಧತೆಯಿಂದ ನರಳುವುದು ಮಾಮೂಲಿಯಾಗಿದೆ.

ಹಿಂದಿನ ಕಾಲದಲ್ಲಿ ಇವತ್ತಿಗೆ ಹೋಲಿಸಿದರೆ ಮಲಬದ್ಧತೆಯಿಂದ ತೊಂದರೆ ಅನುಭವಿಸುವವರ ಸಂಖ್ಯೆ ಕಡಿಮೆಯಿತ್ತು. ಆದರೆ ಈಗ ಅದರ ಪ್ರಮಾಣ ಜಾಸ್ತಿಯಾಗಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಹತ್ತು ಹಲವು ಕಾರಣಗಳು ನಮಗೆ ಸಿಗುತ್ತವೆ. ಇದು ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಏಕೆ ಎನ್ನುವುದಕ್ಕೆ ಉತ್ತರವೂ ಇಲ್ಲಿಯೆ ಸಿಗುತ್ತದೆ. ಮಕ್ಕಳು ಆಟದಲ್ಲಿ ಮಗ್ನರಾಗಿರುವಾಗ ಮಲವಿಸರ್ಜನೆಯನ್ನು ತಡೆದು ಅದುಮಿಟ್ಟುಕೊಳ್ಳುತ್ತಾರೆ. ಇದರಿಂದ ರೆಕ್ಟಮ್ ಮತ್ತು ಕೆಳಭಾಗದ ಕೊಲಾನ್‌ನಲ್ಲಿ ಒತ್ತೊತ್ತಾಗಿ ತುಂಬಿದ ಬೃಹತ್ ಪ್ರಮಾಣದ ಮಲವು ಶೇಖರಗೊಂಡು ಬಳಿಕ ಅದನ್ನು ಹೊರಹಾಕುವಾಗ ತುಂಬಾ ತೊಂದರೆ ಪಡಬೇಕಾಗುತ್ತದೆ.

ಕೆಲವು ಸಂದರ್ಭಗಳಲ್ಲಿ ಸ್ನಾಯುಗಳ ದೌರ್ಬಲ್ಯದಿಂದಲೂ ಕೂಡ ಮಲಬದ್ಧತೆವುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ವೃದ್ಧರಲ್ಲಿ, ಹೆರಿಗೆ ನಂತರದ ಸ್ತ್ರೀಯರಲ್ಲಿ ಕೂಡ ಮಲಬದ್ಧತೆ ಕಂಡು ಬರುತ್ತದೆ. ಇನ್ನು ಹಾಸಿಗೆ ಹಿಡಿದ ರೋಗಿಗಳು, ನಿಯಮಿತವಾಗಿ ಊಟ ಮಾಡದ ವ್ಯಕ್ತಿಗಳು, ಇಲ್ಲವೆ  ಜೀರ್ಣವಾಗಲಾರದ ಆಹಾರವನ್ನು ಸೇವಿಸುವ ವ್ಯಕ್ತಿಗಳಲ್ಲಿಯೂ ಮಲಬದ್ಧತೆ ಕಂಡು ಬರುತ್ತದೆ.

ಮಲಬದ್ಧತೆಯ ಬಗ್ಗೆ ನೋಡುವುದಾದರೆ ಇದು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತದೆಯಂತೆ. ಸಾಮಾನ್ಯವಾಗಿ ಜೀರ್ಣಗೊಂಡ ಆಹಾರಗಳ ಉಳಿದ ಭಾಗವು ದೊಡ್ಡ ಕರುಳಿನ ಮುಖಾಂತರ ನಿಧಾನವಾಗಿ ಚಲಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಮಲಬದ್ಧತೆಯನ್ನು ನಿವಾರಿಸಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ಪಾನೀಯಗಳನ್ನು ಸೇವಿಸುವುದು, ಜತೆಗೆ ಸೊಪ್ಪು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಬಹುಮುಖ್ಯವಾಗಿದೆ.

ನಾವು ನಮ್ಮ ಆಹಾರ ಕ್ರಮಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದೆ ಹೋದರೆ ಮಲಬದ್ಧತೆಯಿಂದ ಬಳಲಬೇಕಾಗಬಹುದು. ಅದನ್ನು ತಡೆಯಬೇಕಾದರೆ ನೈಸರ್ಗಿಕ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು, ಹಣ್ಣು ಹಂಪಲು, ಹಸಿ ತರಕಾರಿಗಳು, ಸೊಪ್ಪು, ಗೆಡ್ಡೆಗೆಣಸುಗಳನ್ನು ಮತ್ತು ಹಣ್ಣುಗಳ ಪಾನೀಯ, ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ನಮ್ಮ ಆರೋಗ್ಯ ನಮ್ಮ ಕೈನಲ್ಲೇ ಇರುವುದರಿಂದ ಧೂಮಪಾನ ಮತ್ತು ಮದ್ಯಪಾನ, ತಂಬಾಕು ಸೇವನೆ ಮೊದಲಾದ ದುಶ್ಚಟಗಳಿಗೆ ವಿದಾಯ ಹೇಳಿ ಒಂದಿಷ್ಟು ಒಳ್ಳೆಯ ಆಹಾರ ಸೇವನೆ ಮತ್ತು ಮುಂಜಾನೆ ವಾಕಿಂಗ್ ಮತ್ತು ವ್ಯಾಯಾಮಗಳನ್ನು ಮಾಡಿಕೊಂಡಿದ್ದರೆ ಮಲಬದ್ಧತೆಯನ್ನು ನಿವಾರಣೆ ಮಾಡುವುದು ಕಷ್ಟವೇನಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು