News Karnataka Kannada
Friday, May 03 2024
ವಿಶೇಷ

ಆರೋಗ್ಯ ಕಾಪಾಡುವ, ರೋಗ ನಿರೋಧಕ ಶಕ್ತಿ ಬೆಳೆಸುವ ಒಣ ಹಣ್ಣುಗಳ ಪೈಕಿ ಬಾದಾಮಿ ಒಂದು!

Almonds are one of the dry fruits that maintain health and boost immunity!
Photo Credit : By Author

ಬಾಯಿ ರುಚಿಗೆ ತಕ್ಕಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು ನಮಗೆ ಅಭ್ಯಾಸವಾಗುತ್ತಿದೆ. ಅದಕ್ಕೆ ನಾವು ಹೊಂದಿಕೊಳ್ಳುತ್ತಿದ್ದೇವೆ. ಹೀಗಾಗಿ ಇತ್ತೀಚೆಗಿನ ಆಹಾರ ಕ್ರಮಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ ತಪ್ಪಾಗಲಾರದು.

ನಮ್ಮನ್ನು ಬಾಧಿಸುವ ಕಾಯಿಲೆಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವುದು ಬಹುಮುಖ್ಯವಾಗಿದೆ. ದಿನ ನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳು ಒಂದಲ್ಲ ಒಂದು ಕಾರಣದಿಂದ ನಮ್ಮ ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುತ್ತಲೇ ಬಂದಿವೆ.

ಆಹಾರ ತಜ್ಞರು ನಮ್ಮ ಸುತ್ತಮುತ್ತ ದೊರೆಯುವ ಹಣ್ಣು, ತರಕಾರಿ ಎಲ್ಲದರ ಬಗ್ಗೆ ಸಂಶೋಧಿಸಿ ಯಾವುದರಲ್ಲಿ ಏನೇನಿದೆ? ಯಾವುದಕ್ಕೆ ಉಪಯೋಗವಾಗುತ್ತದೆ ಎಂಬುದನ್ನು ಕಂಡು ಹಿಡಿದಿದ್ದಾರೆ. ಆರೋಗ್ಯ ಕಾಪಾಡುವ, ರೋಗ ನಿರೋಧಕ ಶಕ್ತಿಯನ್ನು ಬೆಳೆಸುವ ಹೊಂದಿರುವ ಒಣ ಹಣ್ಣುಗಳ ಪೈಕಿ ಬಾದಾಮಿಯೂ ಒಂದಾಗಿದೆ. ಕೊಂಡುಕೊಳ್ಳುವಾಗ ದುಬಾರಿಯಾಗಿ ಕಂಡರೂ ಬೆಲೆಗೆ ತಕ್ಕ ಪೌಷ್ಠಿಕಾಂಶಗಳನ್ನು ದೇಹಕ್ಕೆ ಒದಗಿಸಿ ಆರೋಗ್ಯವನ್ನು ಕಾಪಾಡುವ ಕೆಲಸವನ್ನು ಇದು ಮಾಡುತ್ತದೆ.

ಬಾಯಿಗೆ ರುಚಿಯಾಗಿರುವ ಬಾದಾಮಿಯನ್ನು ಹಾಗೆಯೇ ಅಥವಾ ಗೋಡಂಬಿ, ದ್ರಾಕ್ಷಿಯೊಂದಿಗೆ ಬೆರೆಸಿ ತಿನ್ನಬಹುದು. ಇತರೆ ಖಾದ್ಯಗಳಲ್ಲಿ ಬಳಸಬಹುದು. ಹೆಚ್ಚಿನವರು ಬಾದಾಮಿ ತಿಂದರೆ ಒಳ್ಳೆಯದು ಎಂದು ಮಾತ್ರ ಗೊತ್ತು ಆದರೆ ನಮ್ಮ ದೇಹಕ್ಕೆ ಯಾವ ರೀತಿಯಲ್ಲಿ ಆರೋಗ್ಯ ಎಂಬುವುದು ಗೊತ್ತಿಲ್ಲ. ಬಾದಾಮಿ ಆರೋಗ್ಯಕ್ಕೆ ಏಕೆ ಒಳ್ಳೆಯದೆಂದರೆ ಅದರಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹಾಗೂ ಫೈಬರ್ ಹೇರಳವಾಗಿವೆ. ಅಷ್ಟೇ ಅಲ್ಲ ಇ ವಿಟಮಿನ್, ಡಿ ವಿಟಮಿನ್ ಹಾಗೂ ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂನಂತಹ ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇನ್ನು ಇದು ಓಮೆಗಾ 6 ಆಸಿಡ್ ಮಿಶ್ರಿತ ಕೊಬಿನಾಂಶ ಹೊಂದಿರುವುದರಿಂದ ಮೆದುಳಿನ ಸಮರ್ಪಕ ಕಾರ್ಯನಿರ್ವಹಣೆ ಮತ್ತು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಜತೆಗೆ ಬುದ್ದಿಮತ್ತೆ ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಾದಾಮಿ ಎಣ್ಣೆಯನ್ನೂ ಬಳಸಬಹುದಾಗಿದೆ. ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದ್ದು, ಅತ್ಯುತ್ತಮ ಡಯಟ್‌ ಗೂ ಸಹಕಾರಿ.

ಇನ್ನು ಬಾದಾಮಿಯನ್ನು ಸೇವಿಸುವುದರಿಂದ ಹೃದಯ ಮೆದುಳು ಸೇರಿದಂತೆ ದೇಹದ ಕಾರ್ಯಚಟುವಟಿಕೆ ಸುಗಮವಾಗುತ್ತದೆ. ರೈಬೋಪ್ಲೇವಿನ್ ಮತ್ತು ಎಲ್-ಕಾರ್ನಿಟೈನ್ ಎಂಬ ಪೌಷ್ಠಿಕಾಂಶಗಳು ಇದರಲ್ಲಿರುವುದರಿಂದ ಮೆದುಳಿನ ಚಟುವಟಿಕೆಯನ್ನು ಉದ್ದೀಪನಗೊಳಿಸುತ್ತದೆ. ಆಂಟಿ-ಆಕ್ಸಿಡಾಂಟ್ ಇರುವುದರಿಂದ ರಕ್ತದ ಪರಿಚಲನೆ ಸುಗಮಗೊಳಿಸುವ ಶಕ್ತಿಯನ್ನು ಹೊಂದಿದೆ. ಯುಕೃತ್ತಿನ ಸಮಸ್ಯೆಯಿಂದ ಉಂಟಾಗುವ ತೊಂದರೆಗಳನ್ನು ಪರಿಹರಿಸಿ ಶಕ್ತಿ ತುಂಬುತ್ತದೆ. ಗ್ಲೂಕೋಸ್ ಅಂಶ ನಿಯಂತ್ರಣಕ್ಕೆ ತಂದು ಮದುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮ ಸುಕ್ಕು ಕಟ್ಟುವುದನ್ನು ತಡೆದು ಕಾಂತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಿಮೋಗ್ಲೋಬಿನ್ ಹೆಚ್ಚಿ ಅನಿಮಿಯಾ (ರಕ್ತಹೀನತೆ)ವನ್ನು ತಡೆಗಟ್ಟುತ್ತದೆ. ರಾತ್ರಿ ವೇಳೆ ಮರ್ನಾಲ್ಕು ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನುವುದು ಒಳ್ಳೆಯದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು