News Karnataka Kannada
Thursday, May 02 2024
ಆರೋಗ್ಯ

ಕೂದಲಿನ ಉತ್ತಮ ಆರೈಕೆಗೆ ಆಹಾರ ಕ್ರಮಗಳು

Untitled 2 Recovered Recovered Recovered
Photo Credit :

ಕೂದಲು ಉದುರುವುದು, ಕೂದಲಿನಲ್ಲಿ ಡ್ರೈನೆಸ್ ಉಂಟಾಗುವುದು ಮುಂತಾದ ತೊಂದರೆಗಳು ಆಹಾರ ಕ್ರಮ ಸರಿಯಾಗಿಲ್ಲದಿದ್ದರೆ, ಇಂತಹ ಸಮಸ್ಯೆಗಳು ಉಂಟಾಗುವುದಾದರೆ ಖಂಡಿತವಾಗಿಯೂ ಆಹಾರದಲ್ಲಿ ಬದಲಾವಣೆ ಅವಶ್ಯಕ ವಾಗಿರುತ್ತದೆ.

ಮುಖ್ಯವಾಗಿ ಆಹಾರದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಿ ಪ್ರೋಟಿನ್ ಜಾಸ್ತಿ ಇರುವ ಆಹಾರಗಳಾದ ತರಕಾರಿ, ಡ್ರೈಫ್ರೂಟ್ಸ್, ಬಾದಾಮಿ, ವಾಲ್ನಟ್ಸ್, ಹಾಗೂ ಸನ್‍ಫ್ಲವರ್ ಸೀಡ್, ಪಮ್‍ಕಿನ್ ಸೀಡ್ ಹಾಗೂ ಉತ್ತಮ ಫ್ಯಾಟ್‍ಗಳಾದ ತುಪ್ಪ, ಬೆಣ್ಣೆ, ಎಣ್ಣೆ ಮುಂತಾದ ಆಹಾರಗಳನ್ನು ನಮ್ಮ ಜೀರ್ಣಕ್ರಿಯೆಗೆ ತಕ್ಕಂತೆ ಉಪಯೋಗ ಮಾಡಿಕೊಳ್ಳಬೇಕಾಗುತ್ತದೆ, ಎಂದು ಕಾಕೆಂಜೆ ಆಯುರ್ವೇದಿಕ್ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ಸಸ್ಯಾಹಾರಿಗಳ ಆಹಾರ ಕ್ರಮದಲ್ಲಿ ಉತ್ತಮ ಪ್ರೋಟೀನ್ ಆಹಾರಗಳಾದ ಪನ್ನೀರ್‍ಅನ್ನು ಆಹಾರದಲ್ಲಿ ಉಪಯೋಗಿಸುವುದು, ಮಾಂಸಹಾರಿಗಳಿಗೆ ಮೊಟ್ಟೆ. ಕೋಳಿ, ಮೀನುಗಳನ್ನು ಉಪಯೋಗಿಸಿಕೊಳ್ಳುವುದು ಉತ್ತಮ.

ಕೆಲವೊಮ್ಮೆ ಓಮೇಗಾ3 ಅಥವಾ ಬಯೋಟಿನ್ ಅಂಶ ಕಡಿಮೆಯಾಗಿದ್ದು ಕೂದಲಿನ ಸಮಸ್ಯೆ ಅದರಿಂದ ಪ್ರಾರಂಭವಾಗಿದ್ದರೆ, ಅದನ್ನು ನೀಡುವುದರ ಮೂಲಕ ಕೂದಲಿನ ಆರೈಕೆ ಮಾಡಬಹುದು. ನಮ್ಮ ದಿನನಿತ್ಯದ ಜೀವನವನ್ನು ಒತ್ತಡ ಮುಕ್ತವಾಗಿ ನೋಡಿಕೊಂಡರೆ ಕೂದಲಿನ ಬೆಳವಣಿಗೆಗೆ ಸಹಾಯಕವಾಗಿರುತ್ತದೆ.

ಹಲವು ಬಾರಿ ಹಾರ್ಮೋನಲ್ ಸಮಸ್ಯೆಗಳು, ಥೈರಾಯಿಡ್ ಸಮಸ್ಯೆಗಳು, ನೀರಿನಿಂದ ಕೂದಲಿನ ಸಮಸ್ಯೆಗಳು ಉಂಟಾಗುತ್ತವೆ, ಹೀಗಾಗಿ ಮುಖ್ಯವಾಗಿ ನಮ್ಮ ಕೂದಲಿನ ಸಮಸ್ಯೆಗಳಿಗೆ ಮೂಲ ಕಾರಣವನ್ನು ತಿಳಿದು ಕೊಂಡು ಅದರ ಮೂಲಕ ನಮ್ಮ ಆಹಾರ ಕ್ರಮಗಳನ್ನು ಬದಲಾಯಿಸಿಕೊಳ್ಳುವುದು ಬಹಳ ಮುಖ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು