News Karnataka Kannada
Thursday, May 09 2024
ಆರೋಗ್ಯ

ಮಕ್ಕಳಿಗೆ ಹೊಡೆಯುವ ಮುನ್ನ ಯೋಚಿಸಿ!

Photo Credit :

ಮಕ್ಕಳಿಗೆ ಹೊಡೆಯುವ ಮುನ್ನ ಯೋಚಿಸಿ!

ಪ್ರತಿಯೊಬ್ಬ ತಂದೆ ತಾಯಿಗೂ ಮಕ್ಕಳೇ ಆಸ್ತಿ. ಅವರನ್ನು ಓದಿಸಬೇಕು, ಉನ್ನತ ಹುದ್ದೆಗೆ ಕಳುಹಿಸಬೇಕು, ಹೀಗೆ ತಮ್ಮದೇ ಆದ ಕನಸನ್ನು ಕಾಣುತ್ತಿರುತ್ತಾರೆ. ತಮ್ಮ ಮಕ್ಕಳು ಬೇರೆಯವರಿಗಿಂತ ಯಾವುದರಲ್ಲೂ ಕಡಿಮೆಯಾಗಬಾರದೆಂಬ ಉದ್ದೇಶದಿಂದಲೇ ತಮ್ಮ ಅತೃಪ್ತ ಆಸೆ ಆಕಾಂಕ್ಷೆಗಳನ್ನೆಲ್ಲ ಮಕ್ಕಳ ಮೇಲೆ ಒತ್ತಡ ಹೇರಿ ಅವರ ಮೂಲಕ ಈಡೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ತಮ್ಮ ಮಕ್ಕಳಿಗೆ ಇಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡದೆ ತಮ್ಮ ಅಭಿಲಾಷೆಯಂತೆ, ಆಗಬೇಕೆಂದು ಹಠ ಹಿಡಿಯುತ್ತಾರೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಗೊತ್ತಿದ್ದರೂ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುವ ತವಕದಲ್ಲಿ ಕೆಲವೊಮ್ಮೆ ಮಕ್ಕಳ ಭವಿಷ್ಯವನ್ನೇ ಹಾಳು ಮಾಡಿಬಿಡುತ್ತಾರೆ.

ಇನ್ನು ತಮ್ಮ ಮಕ್ಕಳು ಹೆಚ್ಚು ಅಂಕ ತೆಗೆಯಬೇಕೆಂದು ಪೋಷಕರು ಸರ್ಕಸ್ ಮಾಡುತ್ತಾರೆ. ಮಕ್ಕಳಿಗೆ ವಿದ್ಯೆಯನ್ನು ಇಷ್ಟಪಟ್ಟು ಕಲಿಯಲು ಬಿಡದೆ ಒತ್ತಡ ಹೇರುತ್ತೇವೆ. ಕಲಿಯದಿದ್ದರೆ ಹೊಡೆದು ಕಲಿಸುತ್ತೇವೆ. ಕೋಪ ಬಂದಾಗ ಮಕ್ಕಳಿಗೆ ಎಲ್ಲೆಂದರಲ್ಲಿ ಹೊಡೆಯುವ ತಂದೆ ತಾಯಿಗಳಿದ್ದಾರೆ. ಆದರೆ ಹಾಗೆ ಹೊಡೆಯುವ ಮುನ್ನ ಹೆತ್ತವರು ಎಚ್ಚರ ವಹಿಸುವುದು ಅಗತ್ಯ. ಮಕ್ಕಳು ಕಲಿಯಲಿಲ್ಲ ಅಂದ್ರೆ ತಲೆ ಮೇಲೆ ಎರಡೇಟು ಹೊಡೆಯಿರಿ ಕಲಿಯುತ್ತಾರೆ ಎಂಬ ಮಾತಿದೆ. ಆದರೆ ಹಾಗೆ ಮಾಡುವ ತಂದೆ ತಾಯಿಗಳಿಗೆ ಶಾಕ್ ನೀಡುವ ವಿಷಯವನ್ನು ಮಕ್ಕಳು ಸಣ್ಣ ತಪ್ಪು ಮಾಡಿದರೆ ಸಾಕು ಮಕ್ಕಳ ತಲೆಯ ಮೇಲೆ ಎರಡೇಟು ನೀಡುವ ಪೋಷಕರಿಗೆ ಇಲ್ಲೊಂದು ಎಚ್ಚರಿಕೆ ಇದೆ. ಈ ಕುರಿತಂತೆ ಸತತ 50 ವರ್ಷಗಳ ಅಧ್ಯಯನ ನಡೆಸಲಾಗಿದ್ದು, ಮಕ್ಕಳ ತಲೆ ಮೇಲೆ ಅಥವಾ ಹಿಂದೆ ಹೊಡೆಯುವುದರಿಂದ ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ.

ತಲೆ ಮೇಲೆ ಹೊಡೆಯುವುದರಿಂದ ಮಾನಸಿಕ ಖಿನ್ನತೆ ಹಾಗೂ ಗ್ರಹಣ ಶಕ್ತಿಯನ್ನು ಮಕ್ಕಳು ಕಳೆದುಕೊಳ್ಳುತ್ತಾರಂತೆ. ಈ ಬಗ್ಗೆ 1,60,000 ಮಕ್ಕಳನ್ನು ಸಂಶೋಧನೆಗೊಳಪಡಿಸಲಾಗಿದೆ.

ಇನ್ನಾದರೂ ಮಕ್ಕಳಿಗೆ ಹೊಡೆಯುವ ಮುನ್ನ ಪೋಷಕರೇ ಎಚ್ಚರ ವಹಿಸಿ ಕೋಪದಲ್ಲಿ ಹೊಡೆಯುವ ಒಂದೇಟು ಮಕ್ಕಳ ಭವಿಷ್ಯವನ್ನು ಹಾಳು ಮಾಡಬಹುದು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು