ಮನುಷ್ಯ ಪ್ರತಿ ದಿನವನ್ನು ಲವಲವಕೆಯಿಂದ ಸಾಗಿಸಲು ಬೆಳಗ್ಗಿನ ವಾತಾವರಣ ಉತ್ತಮವಾಗಿರಬೇಕು. ಮನಷ್ಯ ತನ್ನ ಬೆಳಗ್ಗಿನ ಹೊತ್ತನ್ನು ಉತ್ಸಾಹದಿಂದ ಸ್ವಾಗತಿಸಿದರೆ ದಿನಪೂರ್ತಿಯೂ ಆ ಚೆನ್ನಾಗಿರುತ್ತದೆ. ಹಾಗಾಗಿ ನಿಮ್ಮ ಮುಂಜಾನೇಯನ್ನು ಪ್ರತಿನಿತ್ಯವೂ ಹೀಗೇ ಸ್ವಾಗತಿಸಿ.
1.ಬೆಳಗ್ಗೆ ಎದ್ದ ಕೂಡಲೇ ಬೇಸರದ ಮೂಡ್ಗೆ ಜಾರದೆ, ಲವಲವಕೆಯಿಂದ ಮುಂಜಾನೆಯನ್ನು ಸ್ವಾಗತಿಸಿ.
2.ಮನಸ್ಸಿಗೆ ಖುಷಿ ನೀಡುವ ವಿಚಾರವನ್ನು ನೆನೆದು ಹಾಸಿಗೆಯಿಂದ ಏಳಿ.
3. ಎದ್ದ್ ಕೂಡಲೇ ನಿಮ್ಮ ಹೃದಯಕ್ಕೆ ಹತ್ತಿರ ಇರುವವರಿಗೆ ಮುಂಜಾನೆಯ ಶುಭವನ್ನು ತಿಳಿಸಿ.
4. ನಂತರ ನಿಮಗೆ ಹಿತ ಎನಿಸುವ ಸಂಗೀತವನ್ನು ಕೇಳಿ.
5.ನಂತರ ಮನೆ ದೇವರ ಪೂಜೆಯನ್ನು ಮಾಡಿ ಸ್ಮರಣೆಯಲ್ಲಿ ತೊಡಗಿಸಿಕೊಳ್ಳಿ.
6.ನಿಮ್ಮ ಮನಸಿಗೆ ಬೇಜಾರು ಉಂಟು ಮಾಡುವವರ ಜತೆ ಬೆಳಗ್ಗಿನ ಜಾವ ಮಾತನಾಡದೆ ಇರುವುದು ಒಳಿತು. ಯಾಕೆಂದರೆ ಮಾತನಾಡುವ ವೇಳೆ ಕೋಪ ಉಂಟಾದರೆ ಮನಸ್ಸು ಹದ ಗೆಡುತ್ತದೆ. ಆ ನಿಟ್ಟಿನಲ್ಲಿ ಬೆಳಗ್ಗೆ ನಿಮಗೆ ಇಷ್ಟ ಆಗುವವರ ಜತೆ ಮಾತನಾಡಿ ದಿನ ಆರಂಭಿಸಿ.
7.ದಿನದ ಕೆಲಸವನ್ನು ಪಟ್ಟಿ ಮಾಡಿ ಇಟ್ಟುಕೊಳ್ಳಿ.
9. ದೈನಂದಿನ ಸ್ನಾನ, ತಿಂಡಿ ಎಲ್ಲ ಸಮಯಕ್ಕೆ ಸರಿಯಾಗಿ ಮಾಡಿ. ಹೀಗೇ ಪ್ರತಿಯೊಂದು ವಿಚಾರವನ್ನು ಧನಾತ್ಮಕವಾಗಿ ತೆಗೆದುಕೊಂಡು ಉತ್ಸಾಹದಿಂದ ಇರಿ.
ಹೀಗೇ ಎಲ್ಲ ದಿನವೂ ಈ ರೀತಿಯ ಮನಃಸ್ಥಿತಿ ಇದ್ದರೆ ನೀವು ಮಾನಸಿಕವಾಗಿ ಉತ್ಸಾಹದಿಂದ ಇದ್ದು ಇದು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.