News Karnataka Kannada
Saturday, May 04 2024
ಆರೋಗ್ಯ

ಚೈನಾ ಚಾರ್ಟ್ ಎಂಬ ವಿಸ್ಮಯ!

Photo Credit :

ಚೈನಾ ಚಾರ್ಟ್ ಎಂಬ ವಿಸ್ಮಯ!

ಮನೆಯಲ್ಲಿ ಗರ್ಭಿಣಿಯಿದ್ದರೆ ಆ ಮನೆಯ ಪ್ರತಿಯೊಬ್ಬರಿಗೂ ಗಂಡು ಮಗು ಹುಟ್ಟುತ್ತೋ ಅಥವಾ  ಹೆಣ್ಣು ಮಗು ಹುಟ್ಟುತ್ತೋ ಎಂಬ ಬಗ್ಗೆ ಒಂದು ರೀತಿಯ  ಕುತೂಹಲ ಇದ್ದೇ ಇರುತ್ತದೆ. ಕೆಲವರು ಕುತೂಹಲ ತಣಿಸಲು ಗರ್ಭೀಣಿಯಾಗುತ್ತಿದ್ದಂತೆಯೇ ಸ್ಕ್ಯಾನಿಂಗ್ ಮೂಲಕ ಭ್ರೂಣ ಗಂಡೋ ಅಥವಾ ಹೆಣ್ಣೋ ಎಂದು ಪತ್ತೆ ಮಾಡುವುದು ಕಾನೂನು ಬಾಹಿರವೆಂದು ತಿಳಿದಿದ್ದರೂ ವಾಮಮಾರ್ಗದ ಮೂಲಕ ಅಂತಹ ದುಸ್ಸಾಹಸಕ್ಕೆ ಮುಂದಾಗುತ್ತಾರೆ. ಕೆಲವು ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಗಳು ಸರ್ಕಾರದ ಕಾನೂನನ್ನೇ ಗಾಳಿಗೆ ತೂರಿ ಹಣ ಮಾಡುವ ದಂಧೆಗಿಳಿದ ಪ್ರಕರಣಗಳು ಕೂಡ ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುತ್ತವೆ.

ಇವತ್ತಿನ ದಿನಗಳಲ್ಲಿ ಗಂಡಾಗಲಿ, ಹೆಣ್ಣಾಗಲಿ ಮಗುವೊಂದಾದರೆ ಸಾಕು ಎನ್ನುವವರ ಸಂಖ್ಯೆ ಹೆಚ್ಚಾಗಿದೆಯಲ್ಲದೆ, ಅವರು ಇಂತಹದ್ದೇ ಮಗು ಬೇಕೆನ್ನುವ ಬದಲಿಗೆ ಆರೋಗ್ಯಕರ ಮಗುವನ್ನು ಬಯಸುತ್ತಾರೆ. ಇದು ಒಳ್ಳೆಯ ಬೆಳವಣಿಗೆಯೂ ಹೌದು.

ಗರ್ಭೀಣಿ ಮನೆಯಲ್ಲಿದ್ದು ಪ್ರಸವದ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಮುಂದೆ ಹುಟ್ಟುವ ಮಗು ಗಂಡೋ, ಹೆಣ್ಣೋ ಎಂಬ ಬಗ್ಗೆ ಮನೆಯವರಿಗೆಲ್ಲಾ ಕುತೂಹಲ ಸಹಜ. ಕೆಲವರು ಜ್ಯೋತಿಷಿಗಳೊಂದಿಗೆ ಶಾಸ್ತ್ರ ಕೇಳಿ ಅರಿತು ಕೊಳ್ಳುವ ಪ್ರಯತ್ನವನ್ನು ಕೂಡ ಮಾಡುತ್ತಾರೆ. ಅದು ಆಚೆಗಿರಲಿ. ಹುಟ್ಟುವ ಮಗುವಿನ ಬಗೆಗಿನ ಕುತೂಹಲ ಇಂದು ನಿನ್ನೆಯದಲ್ಲ. ಮಾನವ ಸೃಷ್ಠಿಯಾದಂದಿನಿಂದ ಅದು ಮುಂದುವರೆದುಕೊಂಡು ಬಂದಿದೆ. ಸುಮಾರು 700 ವರ್ಷಗಳ ಹಿಂದೆಯೇ ಹುಟ್ಟಲಿರುವ ಮಗುವನ್ನು ಅದು ಹೊಟ್ಟೆಯಲ್ಲಿರುವಾಗಲೇ  ಚಾರ್ಟ್ ಮೂಲಕ ಹೆಣ್ಣೋ ಅಥವಾ ಗಂಡೋ ಎಂದು ತಿಳಿದುಕೊಳ್ಳುತ್ತಿದ್ದರು ಅಂದ್ರೆ ನಮಗೆ ಅಚ್ಚರಿಯಾಗಬಹುದು ಆದ್ರೆ ಇದು ಸತ್ಯ. ಇವತ್ತು ಚೀನಾದ ಬೀಜಿಂಗ್ ಸೈನ್ಸ್ ಆಫ್ ಇನ್ಸ್ಟಿಟ್ಯೂಟ್ ನಲ್ಲಿ  ಭದ್ರವಾಗಿರುವ ಚೈನಾ ಚಾರ್ಟ್ ನ್ನೊಮ್ಮೆ ನೋಡಿದರೆ ಅರ್ಥವಾಗಿ ಬಿಡುತ್ತದೆ. ಈ ಚಾರ್ಟ್ ರಾಜನೊಬ್ಬನ ಸಮಾಧಿಯಲ್ಲಿ ಸಿಕ್ಕಿತೆನ್ನಲಾಗಿದೆ. ಶೇಕಡ 97ರಷ್ಟು ಚಾರ್ಟ್ ನಲ್ಲಿ ನಮೂದಿಸಿದಂತೆಯೇ ಆಗಿದೆ ಎಂಬ ಹೆಗ್ಗಳಿಕೆಯೂ ಈ ಚೈನಾ ಚಾರ್ಟ್ ಗೆ ಇದೆ.

ಚಾರ್ಟ್ ನ್ನು ನೋಡಿ ಗಂಡೋ ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳುವುದು ಕೂಡ ತುಂಬಾ ಸುಲಭ. ಚಾರ್ಟ್ ನ ಮೇಲಿನ ಭಾಗದಲ್ಲಿ (ಎಡದಿಂದ ಬಲಕ್ಕೆ) ಜನವರಿಯಿಂದ ಡಿಸೆಂಬರ್ವರೆಗೆ 12 ತಿಂಗಳುಗಳನ್ನು ಹಾಗೂ ಕೆಳ ಭಾಗದಲ್ಲಿ (ಮೇಲಿನಿಂದ ಕೆಳಕ್ಕೆ) 18 ರಿಂದ 45ರವರೆಗೆ ಗರ್ಭೀಣಿ ಮಹಿಳೆಯ ವಯಸ್ಸನ್ನು ಬರೆಯಲಾಗಿದೆ. ಇಲ್ಲಿ ಒಟ್ಟು 336 ಚೌಕಳಿಯಿದ್ದು ಇದರಲ್ಲಿ ಗಂಡು(ಒ) ಮತ್ತು ಹೆಣ್ಣು(ಈ) ಎಂದು ಸೂಚಿಸಲಾಗಿದೆ.

ಉದಾಹರಣೆಗೆ ಮಹಿಳೆಯೊಬ್ಬಳಿಗೆ 18 ವರ್ಷವಾಗಿದ್ದು, ಅವಳು ಜನವರಿಯಲ್ಲಿ ಋತುಚಕ್ರ ನಿಂತು ಗರ್ಭೀಣಿಯಾಗಿದ್ದರೆ ಆಕೆಗೆ ಹುಟ್ಟುವ ಮಗು ಹೆಣ್ಣು ಆಗುತ್ತದೆ. ಇನ್ನು ಗರ್ಭಿಣಿ ಮಹಿಳೆಗೆ 25 ವರ್ಷವಾಗಿದ್ದು, ಆಕೆ ಫೆಬ್ರವರಿಯಲ್ಲಿ ಗರ್ಭೀಣಿಯಾಗಿದ್ದರೆ ಆಗ ಆಕೆಗೆ ಹುಟ್ಟುವ ಮಗು ಗಂಡು ಆಗುತ್ತದೆ ಎಂದು ಹೇಳಲಾಗಿದೆ.  ಇಷ್ಟಕ್ಕೂ ಇದೇ ಸತ್ಯ ಅಂತನೂ ಹೇಳಕ್ಕಾಗಲ್ಲ. ಆದರೆ ಹಿಂದಿನ ಕಾಲದಲ್ಲಿ ತಮ್ಮ ಕುತೂಹಲ ತಣಿಸಿಕೊಳ್ಳಲು ಇಂತಹವೊಂದು ಚಾರ್ಟ್ ಅನ್ನು ತಯಾರಿಸಿದ್ದರಲ್ಲಾ ಎಂಬುವುದೇ ಕುತೂಹಲದ ಸಂಗತಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು