News Karnataka Kannada
Friday, May 03 2024
ಆರೋಗ್ಯ

ಹಿತ್ತಲ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ..!

Photo Credit :

ಹಿತ್ತಲ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ..!

ತಮ್ಮ ಮನೆಯ ಹಿತ್ತಲಲ್ಲಿ ವಿವಿಧ ತರಕಾರಿಗಳನ್ನು ಬೆಳೆದು ಅದನ್ನೇ ಬಳಸಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಈಗ ಹಾಗಿಲ್ಲ ಲಾಭ ನಷ್ಟದ ಲೆಕ್ಕಾಚಾರದಲ್ಲಿ ನಾವು ಬೆಳೆದು ತಿನ್ನುವುದಕ್ಕಿಂತ ಕೊಂಡು ತಂದು ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದೇವೆ.ನಾವು ನಿತ್ಯ ಹಲವು ತರಕಾರಿಗಳನ್ನು ಬಳಸುತ್ತೇವೆ. ಈ ತರಕಾರಿಗಳು ತನ್ನದೇ ಆದ ಗುಣಗಳನ್ನು ಹೊಂದಿವೆ. ಈ ತರಕಾರಿಗಳಲ್ಲಿ ಬೀಟ್ರೋಟ್ ಒಂದಾಗಿದ್ದು, ಹಲವು ರೋಗಗಳಿಗೆ ರಾಮಬಾಣವಾಗಿದೆ ಎಂದರೆ ತಪ್ಪಾಗಲಾರದು.  

ಬೀಟ್ರೋಟಿನಲ್ಲಿರುವ  ನೈಟ್ರೇಟ್   ರಕ್ತ ಕಣಗಳನ್ನು ಅಗಲಗೊಳಿಸುತ್ತದೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಎದೆ ನೋವಿನಿಂದ ಬಳಲುವವರು  ನೈಟ್ರೇಟ್‍ನ್ನು  ಬಳಸುತ್ತಾರೆ  ಎಂದಿದ್ದಾರೆ ವಿಜ್ಞಾನಿಗಳು. ಅಂದರೆ ಈ ಸಮಸ್ಯೆಯ ಪರಿಹಾರವೂ ಸಹ ಬೀಟ್ರೋಟ್‍ನಲ್ಲಿದೆ ಎಂದಾಯಿತು. ಲಂಡನ್  ಮೆಡಿಕಲ್  ಶಾಲೆಗೆ ಸೇರಿರುವ ಬಾರ್ಟ್  ಹೆಲ್ತ್ ಎನ್‍ಎಚ್‍ಎಸ್  ಟ್ರಸ್ಟ್ ನ ಸಂಶೋಧಕರು ನಡೆಸಿದ ಸಂಶೋಧನೆಯಿಂದ ಈ ಸಂಗತಿ ದೃಢಪಟ್ಟಿದೆ. ಇವರು ಹಲವು ವರ್ಷಗಳ ಕಾಲ ಇದರ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಈ ಸಂಗತಿ ತಿಳಿದುಬಂದಿದೆ. ಅವರು ಪ್ರಯೋಗ ನಡೆಸುತ್ತಿದ್ದಾಗ ಒಂದು ಅನಿರೀಕ್ಷಿತ ಸಂಗತಿ ಗೋಚರವಾಯಿತು. ಈ ರಸವನ್ನು  ಸೇವಿಸಿದ ವ್ಯಕ್ತಿಗಳ ಮೂತ್ರ  ಗುಲಾಬಿ ಬಣ್ಣಕ್ಕೆ ಬದಲಾಯಿತಂತೆ. ಅಂದರೆ ಇದು ಮೂತ್ರ ಬಣ್ಣದ ಮೇಲೂ ಪ್ರಭಾವ ಬೀರುತ್ತದೆ ಎನ್ನುವ ಸಂಗತಿ ಅರಿವು ವಿಜ್ಞಾನಿಗಳಿಗೆ ಮೂಡಿತಂತೆ. ನೈಟ್ರೆಟ್ ಮಣ್ಣಿನಿಂದ ದೊರಕುತ್ತದೆ. ಅದನ್ನು ಹೀರಿ ತರಕಾರಿ ಬೆಳೆಯುತ್ತದೆ. ಪುಟ್ಟ ನೈಟ್ರೇಟ್ ನಿಂದ ಎಷ್ಟೊಂದು ಪ್ರಯೋಜನಗಳಿವೆ  ಎನ್ನುವ ಸಂಗತಿಗಳು ಬೆಳಕಿಗೆ ಬಂದಾಗ ನಮಗೆ ತುಂಬಾ ಆಶ್ಚರ್ಯವಾಗಿತ್ತು ಎನ್ನುವ ಅಭಿಪ್ರಾಯವನ್ನು ಸಂಶೋಧಕ  ಡಾ. ಅಮ್ರಿತ್ ಅಹ್ಲುವಾಲಿಯ ಹೊರಗೆಡವಿದ್ದಾರೆ. 

ಹಸಿರು ಸೊಪ್ಪುಗಳು ಮತ್ತು ಬೀಟ್ರೂಟ್ ನಲ್ಲಿ ಜೀರ್ಣವಾಗಿ  ನೈಟ್ರೇಟ್ ಪ್ರಮಾಣ ಹೇರಳವಾಗಿದೆ. ಇದು ಹೃದಯದ ಆರೋಗ್ಯವನ್ನು ನಿಸ್ಸಂದೇಹವಾಗಿ  ಕಾಪಾಡುತ್ತದೆ. ಬ್ರಿಟಿಷ್  ಹಾರ್ಟ್ ಫೌಂಡೇಷನ್‍ನ  ವೈದ್ಯಕೀಯ ನಿರ್ದೇಶಕರಾದ  ಪ್ರೋ. ಪೀಟರ್ ವಿಸ್ಬೆರಗ್ ಪ್ರಕಾರ ನಮಗೆ ತರಕಾರಿ ಸೇವನೆಯ ಮಹತ್ವ ತಿಳಿದಿದೆ. ಆದರೆ ಯಾವ ತರಕಾರಿಗಳಲ್ಲಿ ನೈಟ್ರೇಟ್ ಪ್ರಮಾಣ ಹೆಚ್ಚಿದೆ ಎಂದು ತಿಳಿದು ರಕ್ತದೊತ್ತಡದವನ್ನು ದೂರ ಮಾಡಿಕೊಳ್ಳುವತ್ತ ಗಮನ ನೀಡ ಬೇಕು.ಇಷ್ಟು ದಿನಗಳ ಕಾಲ ಈ ತರಕಾರಿ ರಕ್ತಹೀನತೆಯನ್ನು ದೂರ ಮಾಡುತ್ತಿತ್ತು, ಈಗ ಅಧಿಕರಕ್ತದೊತ್ತಡಕ್ಕೂ ಸಹ ಕಡಿವಾಣ ಹಾಕುತ್ತದೆ ಎಂದಿದ್ದಾರೆ.

 

ನಾವು ಇತ್ತೀಚಿಗಿನ ದಿನಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುವ ಆಹಾರಕ್ಕಿಂತ ಬಾಯಿಗೆ ರುಚಿಯಾದ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಅವು ನಮ್ಮ ಶರೀರಕ್ಕೆ ಹಾದು ಬರುವುದಿಲ್ಲ ಎಂಬ ಸತ್ಯಗೊತ್ತಿದ್ದರೂ ಅದನ್ನೇ ಸೇವಿಸುತ್ತಿದ್ದೇವೆ. ಬೇಸಿಗೆ ಕಾಲದಲ್ಲಿ ತರಕಾರಿ, ಹಣ್ಣುಗಳನ್ನು ಆರೋಗ್ಯದ ದೃಷ್ಠಿಯಿಂದ ಸೇವಿಸುವುದು ಮುಖ್ಯ. ಆದರೆ ನಮಗೆ ಕೆಲವು ತರಕಾರಿಗಳಲ್ಲಿರುವ ಆರೋಗ್ಯವರ್ಧಕ ಗುಣಗಳ ಬಗ್ಗೆ ಗೊತ್ತಿದ್ದರೂ ನಾವು ಅದನ್ನು ಸೇವಿಸುವುದೇ ಇಲ್ಲ. ಆದರೆ ಪ್ರತಿಯೊಂದು ತರಕಾರಿಯಲ್ಲೂ ಒಂದೊಂದು ರೀತಿಯ ಔಷಧೀಯ ಗುಣಗಳಿವೆ ಅವುಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ನಾವು ಕಲಿತುಕೊಳ್ಳಬೇಕಷ್ಟೆ. 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು