ವಿಜಯಪುರ: ಇಂಡಿ ಪಟ್ಟಣದಲ್ಲಿ ಘೋರ ದುರಂತವೊಂದು ನಡೆದುಹೋಗಿದೆ, ಇಲ್ಲಿನ ಆರ್. ಎಂ ಶಾಹಾ ಶಾಲೆಯ ಮೊದಲ ಮಹಡಿಯಿಂದ ಆಯತಪ್ಪಿ ಬಿದ್ದು ಇಂಡಿ ತಾಲೂಕಿನ ಮಾವಿನಳ್ಳಿ ಗ್ರಾಮದ ಶಿವರಾಜ್ ರೋಡಗಿ ಮೃತಪಟ್ಟಿದ್ದಾನೆ.
ಯುಕೆಜಿ ತರಗತಿಯಲ್ಲಿ ಓದುತ್ತಿದ್ದ ಶಿವರಾಜ್ ರೋಡಗಿ ಇಂದು ಬೆಳಗ್ಗೆ ಶಾಲೆಯ ಮೊದಲ ಮಹಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಕೆಳಗೆ ಬಿದ್ದಿದ್ದರಿಂದ ಶಿವರಾಜ್ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇಂಡಿ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.