ಗುವಾಹಟಿ: ಮ್ಯಾನ್ಮಾರ್ನಿಂದ ಭಾರತಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದ ಕನಿಷ್ಠ ಏಳು ವಿಚಿತ್ರ ಪ್ರಾಣಿಗಳನ್ನು ಅಸ್ಸಾಂ ಪೊಲೀಸರು ಕ್ಯಾಚಾರ್ ಜಿಲ್ಲೆಯಲ್ಲಿ ರಕ್ಷಿಸಿದ್ದಾರೆ.
ಈ ಸಂಬಂಧ ಹಿಮಿಂಗ್ ರೂಪಿನಾ (41), ಚುಹಾನ್ ದೋಮಾ (29), ಲಾಲ್ರಿಂಟ್ ಲುವಾಂಗ್ಗಾ (24), ಬನ್ಲಾಲ್ ನಿಗಿಡಾ (30), ಜಿನಿಲಾಲ್ ರೂಟ್ ಕೆಎಂ (30) ಎಂಬುವರನ್ನು ಬಂಧಿಸಲಾಗಿದೆ.
“ಭಾನುವಾರ ಸಂಜೆ ಅಸ್ಸಾಂ ಮತ್ತು ಮಿಜೋರಾಂ ನಡುವಿನ ಲೈಲಾಪುರ್ ಗೇಟ್ ಗಡಿ ಕ್ರಾಸಿಂಗ್ನಲ್ಲಿ ನಾವು ಕಾರನ್ನು ತಪಾಸಣೆ ಮಾಡಿದಾಗ ಪ್ರಾಣಿಗಳು ಪತ್ತೆಯಾಗಿವೆ ಎಂದು ಕ್ಯಾಚಾರ್ ಎಸ್ಪಿ ನುಮಲ್ ಮಹತ್ತಾ ಹೇಳಿದ್ದಾರೆ. ಒಂದು ಪನಾಮನಿಯನ್ ಬಿಳಿ ಮುಖದ ಕ್ಯಾಪುಚಿನ್, ನಾಲ್ಕು ಕಪ್ಪು ಮಕಾಕ್ಗಳು ಮತ್ತು ಎರಡು ಸಾಮಾನ್ಯ ಒಪೊಸಮ್ ಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು.
ಈ ಪ್ರಾಣಿಗಳು ಸ್ಥಳೀಯ ಹವಾಮಾನಕ್ಕೆ ಒಗ್ಗಿಕೊಳ್ಳದ ಕಾರಣ ಅವುಗಳನ್ನು ಅಸ್ಸಾಂ ರಾಜ್ಯ ಮೃಗಾಲಯಕ್ಕೆ ಕಳುಹಿಸಿದ್ದೇವೆ ಎಂದು ಪಾಲ್ವೆ ಹೇಳಿದರು.