News Karnataka Kannada
Saturday, May 04 2024
ಕ್ರೈಮ್

ಬೆಂಗಳೂರು: ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ ಪೊಲೀಸರು

ಸಿಸಿಬಿ ಪೊಲೀಸರು ಕಳೆದ ಒಂದ ವಾರದಿಂದ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದ್ದು, ಏಳು ಜನ ಡ್ರಗ್ ಪೆಡ್ಲರ್​​ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1.66 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಿಕೊಂಡಿದ್ದಾರೆ.
Photo Credit : News Kannada

ಬೆಂಗಳೂರು:  ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಪೊಲೀಸರು ಮನೆಯೊಂದರ ಮೇಲೆ ದಾಳಿ ನಡೆಸಿ ನಾಲ್ವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಗಂಗೊಂಡನಹಳ್ಳಿ ಅನಿಲ್ (21), ಅಂದ್ರಹಳ್ಳಿ ಕಾರ್ತಿಕ್ (18), ನವೀನ್ (20) ಮತ್ತು ದೊಂಬರಹಳ್ಳಿ ಮಂಜುನಾಥ್ (19) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 2 ಕೆಜಿ ಗಾಂಜಾ, ಎರಡು ಬೈಕ್ ಹಾಗೂ ಚಾಕುಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರಂಭಿಕ ವಿಚಾರಣೆಯಲ್ಲಿ ಹೊಸ ವರ್ಷದ ಮುನ್ನಾದಿನದಂದು ಗ್ರಾಹಕರಿಗೆ ಡ್ರಗ್ಸ್ ಸರಬರಾಜು ಮಾಡಲು ಭಾರಿ ಮೊತ್ತದ ಆರ್ಡರ್ ತೆಗೆದುಕೊಂಡಿರುವುದು ಗೊತ್ತಾಗಿದೆ. ಶೀಘ್ರ ಹಣ ಗಳಿಸಲು ಹಾಗೂ ಐಷಾರಾಮಿ ಜೀವನ ನಡೆಸಲು ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.

ಆರೋಪಿಗಳು ಡಿ.31ರಂದು ವಿವಿಧೆಡೆ ಡ್ರಗ್ಸ್ ಸರಬರಾಜು ಮಾಡಲು ಅಪಾರ ಪ್ರಮಾಣದ ಆರ್ಡರ್ ಪಡೆದಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು