ಚಂಡೀಗಢ: ಇಟಲಿಯಿಂದ ಭಾರತಕ್ಕೆ ಮರಳಿದ ಪತಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಪಂಜಾಬ್ನ ಸಂಧು ಚಾಥಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಪುರ್ತಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವತ್ಸಲಾ ಗುಪ್ತಾ ಮಾಹಿತಿ ನೀಡಿದ್ದು, ಅನಿವಾಸಿ ಭಾರತೀಯನನ್ನು ಸುಖದೇವ್ ಸಿಂಗ್ ಎಂದು ಗುರುತಿಸಲಾಗಿದ್ದು, ಸೋಮವಾರ ಇಟಲಿಯಿಂದ ತನ್ನ ಮನೆಗೆ ಮರಳಿದ್ದ. ಅದೇ ದಿನ ಪತ್ನಿ ಹರ್ ಪ್ರೀತ್ ಕೌರ್ (45) ಅವರೊಂದಿಗೆ ಯಾವುದೋ ವಿಷಯಕ್ಕೆ ತೀವ್ರ ಜಗಳವಾಡಿದ್ದರು. ಬಳಿಕ ಸಿಂಗ್ ತನ್ನ ಪತ್ನಿಯನ್ನು ಕೋಣೆಗೆ ಎಳೆದೊಯ್ದು ಆಕೆಯ ತಲೆಯನ್ನು ಬಲವಾಗಿ ಜಜ್ಜಿದ್ದಾರೆ ಹತ್ಯೆ ಮಾಡಿದ್ದಾನೆ.
ಇದೀಗ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.