ತಮಿಳುನಾಡು: ಗಾಳಿಪಟವನ್ನು ಹಾರಿಸಲು ಬೇಕಾದ ಚೈನೀಸ್ ಮಾಂಜಾ ತಯಾರಿಕೆ ಹಾಗೂ ಮಾರಾಟವನ್ನು ತಮಿಳುನಾಡು ಸರ್ಕಾರ ನಿಷೇಧ ಮಾಡಿದೆ.
ಗಾಳಿಪಟದ ಚೈನೀಸ್ ಮಾಂಜಾದಿಂದ ಅಪಾಯವೂ ಇದೆ, ಮಾಂಜಾದ ಎಳೆಗಳು ನೈಲಾನ್, ಪ್ಲಾಸ್ಟಿಕ್, ಕೆಲವೊಮ್ಮೆ ಗಾಜಿನಿಂದಲೂ ಲೇಪಿತವಾಗಿರುತ್ತವೆ. ಯಾವುದೋ ಸಂದರ್ಭದಲ್ಲಿ ಜನರ ಕತ್ತಿಗೆ ದಾರ ತಗುಲಿದರೆ ಜೀವ ಹೋಗುವುದು ಗ್ಯಾರೆಂಟಿ. ಈ ರೀತಿ ಘಟನೆಗಳು ಸಾಕಷ್ಟು ನಡೆದಿರುವ ಕಾರಣ ತಮಿಳುನಾಡು ಸರ್ಕಾರ ಮಾಂಜಾಗೆ ನಿಷೇಧ ಹೇರಿದೆ.
ಮಕ್ಕಳಿಗೆ, ಪ್ರಾಣಿಗಳು, ಗಾಡಿ ಓಡಿಸುವವರಿಗೆ ಯಾರಿಗಾದರೂ ಮಾಂಜಾ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇದೆ, ಹೀಗಾಗಿ ಮಾಲ್ ಅಥವಾ ಇನ್ಯಾವುದೇ ಪ್ರದೇಶದಲ್ಲಿ ಇದನ್ನು ಮಾರುವಂತಿಲ್ಲ, ಹಾಗೂ ತಯಾರಿಕೆ ಮಾಡುವಂತಿಲ್ಲ ಎಂದು ಖಡಕ್ ಆದೇಶ ಹೊರಡಿಸಿದೆ.