ನವದೆಹಲಿ: ಪ್ರಧಾನಿ ಮೋದಿ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾರವರು ಇಂದು ಬೆಳಗ್ಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮೂರು ಮಹತ್ವದ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ.
ಅಖೌರಾ-ಅಗರ್ತಲಾ ಕ್ರಾಸ್ ಬಾರ್ಡರ್ ರೈಲು ಲಿಂಕ್, ಖುಲ್ನಾ-ಮೊಂಗ್ಲಾ ಪೋರ್ಟ್ ರೈಲ್ ಲಿಂಕ್ ಹಾಗೂ ಮೈತ್ರೀ ಸೂಪರ್ ಥರ್ಮಲ್ ಪವರ್ ಪ್ಲಾಂಟ್ಗೆ ಗ್ರೀನ್ಸಿಗ್ನಲ್ ನೀಡಲಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಪರ್ಕ ಸೇವೆಯನ್ನು ಗಟ್ಟಿಗೊಳಿಸಲು ಸುಮಾರು 392ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಅಗರ್ತಲ-ಅಖೌರ ರೈಲು ಸೇವೆ ಒಂದಾದರೇ ಬಾಂಗ್ಲದೇಶದ ಸುಮಾರು 65 ಕಿಲೋಮೀಟರ್ ಉದ್ದವಿರುವ ಖುಲ್ನಾ-ಮೋಂಗ್ಲಾ ಪೋರ್ಟ್ ರೈಲು ಸೇವೆ ಎರಡನೆಯದ್ದಾಗಿದೆ. ಭಾರತದ ಎನ್ಟಿಪಿಸಿ ಲಿಮಿಟೆಡ್ ಮತ್ತು ಬಾಂಗ್ಲಾದೇಶದ ಪವರ್ ಡೆವಲಪ್ಮೆಂಟ್ ಬೋರ್ಡ್ ಜಂಟಿಯಾಗಿ ನಿರ್ಮಿಸಿದ ಮೈತ್ರಿ ಸೂಪರ್ ಥರ್ಮಲ್ ಪವರ್ ಪ್ಲಾಂಟ್ನ ಎರಡನೇ ಘಟಕವನ್ನೂ ಕೂಡ ಉದ್ಘಾಟಿಸಲಿದ್ದಾರೆ.