News Karnataka Kannada
Monday, April 29 2024
ಕ್ರೈಮ್

ಮೊಬೈಲ್​ ನೋಡುತ್ತಿದ್ದ ಪತ್ನಿ ಮೇಲೆ ಗುಂಡು ಹಾರಿಸಿದ ಪತಿ: ವಿಡಿಯೋ ವೈರಲ್

Died
Photo Credit : News Kannada

ರಾಜಸ್ಥಾನ: ಪತಿಯೋರ್ವ ಅಂಗಡಿಯಲ್ಲಿ ಕುಳಿತ್ತಿದ್ದ ಪತ್ನಿಗೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ಫಲೋಡಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪತ್ನಿಯನ್ನು ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪತಿ ಮಹಿರಾಮ್​ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿದ ಆರೋಪಿ. ಈತನಿಗೆ ಮತ್ತು ಪತ್ನಿಗೆ ಎರಡು ವರ್ಷಗಳ ಹಿಂದೆ ಜಗಳ ನಡೆದಿತ್ತು. ಹಾಗಾಗಿ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ನಾಗೌರ್​ ರಸ್ತೆಯಲ್ಲಿರುವ ಪತ್ನಿಯ ಅಂಗಡಿಗೆ ಬಂದ ಮಹಿರಾಮ್ ಮೊದಲಿಗೆ ಜಗಳ ಮಾಡಿ​ ತನ್ನ ಕೈಯಲ್ಲಿದ್ದ ಗನ್​ನಿಂದ ಆಕೆಗೆ ಶೂಟ್​​ ಮಾಡಿದ್ದಾನೆ.

ಪತ್ನಿಗೆ ಗುಂಡು ಹಾರಿಸಿದ ಬಳಿಕ ಮಹಿರಾಮ್​ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದನ್ನು ಕಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾಳೆ.

ಇನ್ನು ಪತ್ನಿಯನ್ನು ಕೊಂದ ಪತಿ ಮಹಿರಾಮ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

https://twitter.com/i/status/1761781298232713602

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು