ಲಕ್ನೋ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ (ಐಐಟಿ-ಬಿಎಚ್ಯು) ವಿದ್ಯಾರ್ಥಿನಿಯನ್ನು ಬುಧವಾರ ರಾತ್ರಿ ಕ್ಯಾಂಪಸ್ನೊಳಗೆ ಮೂವರು ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ಚುಂಬಿಸಿದ್ದಾರೆ ಮತ್ತು ವಿವಸ್ತ್ರಗೊಳಿಸಿದ್ದಾರೆ.
ಇಲ್ಲಿನ ಹಾಸ್ಟೆಲ್ ಬಳಿ ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ವಿವಸ್ತ್ರಗೊಳಿಸಿ ಕಿರುಕುಳ ನೀಡಿ, ಕೃತ್ಯವನ್ನು ವಿಡಿಯೊ ಸಹ ಮಾಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ವಿದ್ಯಾರ್ಥಿನಿಯು ತನ್ನ ಹಾಸ್ಟೆಲ್ನಿಂದ, ಸ್ನೇಹಿತನೊಂದಿಗೆ ಬುಧವಾರ ರಾತ್ರಿ ಹೊರಗಡೆ ಬಂದಿದ್ದಾಗ ಈ ಘಟನೆ ನಡೆದಿದೆ. ಸಂತ್ರಸ್ತೆಯು ಪೊಲೀಸರಿಗೆ ನೀಡಿರುವ ದೂರಿನ್ವಯ ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆದಿದೆ ಎಂದು ವಾರಾಣಸಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಬಿಎಚ್ಯುನ ನೂರಾರು ವಿದ್ಯಾರ್ಥಿಗಳು ಘಟನೆ ಖಂಡಿಸಿ ಗುರುವಾರ ಪ್ರತಿಭಟನೆ ನಡೆಸಿದರು.