ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ದೊಡ್ಡಬಳ್ಳಾಪುರ ನೂತನ ಹೆದ್ದಾರಿಯಲ್ಲಿ ವ್ಹೀಲಿಂಗ್ ಪುಂಡರು ಹೆಚ್ಚಾಗಿದೆ.
ವೀಕೆಂಡ್ನಲ್ಲಿ ನಂದಿಬೆಟ್ಟ ಹಾಗೂ ಈಶಾ ಪೌಂಡೇಶನ್ಗೆ ಲಾಂಗ್ ಡ್ರೈವ್ ಬರುವ ಪುಂಡರು ಹಿಂಬದಿಯಲ್ಲಿ ಯುವಕ ಯುವತಿಯರನ್ನ ಕೂರಿಸಿಕೊಂಡು ಹೆದ್ದಾರಿಯುದ್ದಕ್ಕೂ ವೀಲಿಂಗ್ , ವಿಡಿಯೋ ಮಾಡುತ್ತಾ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.
ಹೆದ್ದಾರಿಯಲ್ಲಿ ಹೈಟೆಕ್ ಕ್ಯಾಮರಾಗಳಿದ್ದರೂ ಪೊಲೀಸರ ಭಯವಿಲ್ಲದೆ ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದಾರೆ. ಪುಂಡರ ವೀಲಿಂಗ್ ಹುಚ್ಚಾಟದ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ಇನ್ನು ವ್ಹೀಲಿಂಗ್ ಹಾವಳಿಯಿಂದ ಟೋಲ್ ಸುಂಕ ಕಟ್ಟುವ ವಾಹನ ಸವಾರರ ಪರದಾಡುವಂತಾಗಿದೆ. ಸದ್ಯ ವ್ಹೀಲಿಂಗ್ ಪುಂಡರಿಗೆ ತಕ್ಕ ಶಾಸ್ತಿ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.