News Karnataka Kannada
Friday, May 10 2024
ಕ್ರೈಮ್

ಇಬ್ಬರು ಮಹಿಳೆಯರ ಮೇಲೆ ಹಲ್ಲೆ: ಆರೋಪಿಯ ಬಂಧನ

Assault on women: Accused arrested
Photo Credit : News Kannada

ಮಂಗಳೂರು: ವ್ಯಕ್ತಿಯೋರ್ವ ಇಬ್ಬರು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಡಗನ್ನೂರಿನಲ್ಲಿ ನಡೆದಿದೆ.

ಸುಳ್ಯ ನಿವಾಸಿ ಸುರೇಶ್ ಎಂಬಾತ, ಬಡಗನ್ನೂರು ನಿವಾಸಿ ಸುರೇಖ (54) ಹಾಗು ಆಲಂಕಾರ್ ಕುಂತೂರು ನಿವಾಸಿ ಗಿರಿಜಾ (52) ಎಂಬುವರ ಮೇಲೆ ಹಲ್ಲೆ ನಡೆಸಿದ್ದಾನೆ. ಸುರೇಖ ಹಾಗು ಗಿರಿಜಾ ಅವರು ಗುಡ್ಡದಲ್ಲಿ ಅಣಬೆ ಹೆಕ್ಕುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಸುರೇಶ್ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು, ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಸುರೇಶ್ ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಗಿರಿಜಾ ಹಾಗು ಸುರೇಖ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು