News Karnataka Kannada
Friday, May 03 2024
ಚಿಕಮಗಳೂರು

ಚಿಕ್ಕಮಗಳೂರು: ಕಾಲಮಿತಿ ಯಕ್ಷಗಾನ, ಚೊಚ್ಚಲ ಪ್ರಯತ್ನದಲ್ಲೇ ಗಮನ ಸೆಳೆದ ಮಹಿಳೆಯರು

Time-bound Yakshagana at Kalamandira, women who grabbed attention in their debut attempt
Photo Credit : News Kannada

ಚಿಕ್ಕಮಗಳೂರು: ಸುಗಮ ಸಂಗೀತ ಗಂಗಾ, ಯಕ್ಷಗಾನ ಅಭಿಮಾನಿ ಬಳಗ, ಕಲ್ಕಟ್ಟೆ ಪುಸ್ತಕದ ಮನೆ, ಮಲ್ಲಿಗೆ ಸುಗಮ ಸಂಗೀತಟ್ರಸ್ಟ್ ಹಾಗೂ ಯಕ್ಷಸಿರಿ ನಾಟ್ಯವೃಂದದಿಂದ ನಗರದ ಕುವೆಂಪು ಕಲಾಮಂದಿರದಲಿ ಮಹಿಳೆಯರಿಂದ ನಡೆದ ಸುದರ್ಶನಗರ್ವಭಂಗ ಯಕ್ಷಗಾನ ನೋಡುಗರ ಮನ ಗೆದ್ದಿತು.

ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಂದ ನಡೆದ ಪ್ರಸಂಗದಲ್ಲಿ ಹುಮ್ಮಸ್ಸಿನಿಂದ ಅಭಿನಯಿಸುವ ಮೂಲಕ ಮಹಿಳೆಯರು. ತಾವು ಪುರುಷರಿಗಿಂತ ಕಮ್ಮಿಯಿಲ್ಲ ಎಂಬುದನ್ನು ಚೊಚ್ಚಲ ಪ್ರಯತ್ನದಲ್ಲೇ ಸಾಭೀತುಪಡಿಸಿದರು.

ಮಹಾ ವಿಷ್ಣುವಿನ ಶಸ್ತ್ರವಾದ ಸುದರ್ಶನನಿಗಿದ್ದ ವಿಷ್ಣುವಿನ ಗೆಲುವು, ನನ್ನಿಂದಲೇ ಎಂಬ ಗರ್ವವನ್ನು ಇಳಿಸುವ ಪ್ರಸಂಗದಲ್ಲಿ ಮಹಿಳಾ ಭಾಗವತರ ಕಂಚಿನ ಕಂಠದ ಗಾಯನ, ಪಾತ್ರಧಾರಿಗಳ ಪ್ರಾಸಬದ್ಧ, ಚುರುಕು ಸಂಭಾಷಣೆ, ನವಿರು ಹಾಸ್ಯ, ನೃತ್ಯ, ಮಿಂಚಿನ ಅಭಿನಯ ಪ್ರೇಕ್ಷಕರನ್ನು ೩ ಗಂಟೆಗೂ ಅಧಿಕಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಬಿಎಸ್‌ಎನ್‌ಎಲ್ ಉದ್ಯೋಗಿ ಪರಮೇಶ್ವರ್ ಗಮನ ಸೆಳೆದರೆ, ಕಲ್ಕಟ್ಟೆ ಪುಸ್ತಕದ ಮನೆಯ ವ್ಯವಸ್ಥಾಪಕಿ ರೇಖಾ ನಾಗರಾಜರಾವ್ ಸಂಯೋಜನೆ ಮತು ರಾಕ್ಷಸರಾಜ ಶತ್ರು ಪ್ರಸೂದನನ ಪಾತ್ರದಲ್ಲಿ ಪರಕಾಯಪ್ರವೇಶ ಮಾಡಿದವರಂತೆಅಭಿನಯಿಸುವ ಮೂಲಕ ಮೊದಲ ಪ್ರಯತ್ನದಲ್ಲೇ ಸೈ ಎನಿಸಿಕೊಂಡರು.

ನಿವೃತ್ತಎ.ಎಸ್.ಐ ಸುರೇಶ್ ಭಟ್‌ಅವರ ವಿದೂಷಕನ ಪಾತ್ರ, ಪ್ರಾಸ ಬದ್ಧ ಮಾತು, ನವಿರು ಹಾಸ್ಯಕಲಾಮಂದಿ ರದಲ್ಲಿ ನಗೆಯ ಬುಗ್ಗೆಗಳನ್ನೆಬ್ಬಿಸಿತು.
ಜಿಲ್ಲೆ ಮತ್ತು ನಗರದ ಪ್ರತಿಭೆಗಳಾದ ಜಯಪ್ರಕಾಶ್ ಹೆಬ್ಬಾರ್, ಶೋಭಾ ಪರಮೇಶ್ವರ್, ಮಹಾಲಕ್ಷ್ಮಿ ಹೆಗಡೆ, ಪ್ರತಿಭಾ ನಂದಕುಮಾರ್, ಕೆ.ಎಚ್.ಗೀತಾ, ಅಪೂರ್ವ ವೆಂಕಟೇಶ್, ಪೂರ್ಣಿಮಾ, ಅನಿರುದ್ಧಎಂ.ಕಾಕತ್ಕರ್, ವೈಷ್ಣವಿ ಎನ್.ರಾವ್, ಹಿಮಗಿರಿ ಮತ್ತು ಮಾಸ್ಟರ್‌ದಕ್ಷತಮ್ಮ ಚೊಚ್ಚಲ ಅಭಿನಯದ ಮೂಲಕ ಗಮನ ಸೆಳೆದರು.

ಆಶಾಕಿರಣ ಅಂದ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಯಕ್ಷಸಿರಿ ನಾಟ್ಯವೃಂದ ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಕಲಾವಿದರನ್ನು ಗೌರವಿಸಲಾಯಿತು.

ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್, ಸಾಂಸ್ಕೃತಿಕ ಸಂಘದ ಆನಂದ್ ಕುಮಾರ್ ಶೆಟ್ಟಿ, ರಣಜಿತ್ ಸಿಂಗ್, ಆದಿಚುಂಚನಗಿರಿ ವಿವಿಯ ಕುಲಪತಿ ಡಾ.ಸಿ.ಕೆ. ಸುಬ್ರಾಯ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಕರ್ನಾಟಕ ನಾಟಕ ಅಕಾಡೆಮಿಸದಸ್ಯ ಬಿಸ್ಲೇಹಳ್ಳಿ ಸೋಮ ಖರ್, ಲೋಕೇಶಪ್ಪ,ಕಲ್ಕಟ್ಟೆ ಪುಸ್ತಕದ ಮನೆಯ ಸಾಹಿತಿ ಎಚ್.ಎಂ. ನಾಗರಾಜರಾವ್, ಮಲ್ಲಿಗೆಟ್ರಸ್ಟ್‌ನಅಧ್ಯಕ್ಷ, ಗಾಯಕ ಮಲ್ಲಿಗೆ ಸುಧೀರ್, ಮಂಜುಳಾ ಮಹೇಶ್,ಯಕ್ಷಗಾನಅಭಿಮಾನಿ ಬಳಗದ ಕೆ.ಎನ್. ಮಂಜುನಾಥ ಭಟ್, ಶಂಕರನಾರಾಯಣ ಭಟ್ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು