News Karnataka Kannada
Tuesday, April 30 2024
ಅಡುಗೆ ಮನೆ

ಮನೆಯಲ್ಲಿ ಸುಲಭವಾಗಿ ಮಾಡಿ ಪಾಲಕ್ ಕಾಬೂಲ್ ಮಸಾಲ

ಪಾಲಕ್ ನಿಂದ ತಯಾರಿಸಲ್ಪಡುವ ಪದಾರ್ಥಗಳನ್ನು ಚಪಾತಿ, ರೋಟಿ ಜತೆಗೆ ಸೇವಿಸಲು ಮಜಾ ಕೊಡುತ್ತದೆ. ಅದರಲ್ಲೂ ಕಾಬೂಲ್  ಮಸಾಲ ಇನ್ನಷ್ಟು ರುಚಿಯಾಗಿರುತ್ತದೆ.
Photo Credit : NewsKarnataka

ಪಾಲಕ್ ನಿಂದ ತಯಾರಿಸಲ್ಪಡುವ ಪದಾರ್ಥಗಳನ್ನು ಚಪಾತಿ, ರೋಟಿ ಜತೆಗೆ ಸೇವಿಸಲು ಮಜಾ ಕೊಡುತ್ತದೆ. ಅದರಲ್ಲೂ ಕಾಬೂಲ್ ಮಸಾಲ ಇನ್ನಷ್ಟು ರುಚಿಯಾಗಿರುತ್ತದೆ.

ಬೇಕಾಗುವ ಪದಾರ್ಥಗಳು: ಪಾಲಕ್ ಸೊಪ್ಪು- 2ಕಟ್ಟು, ಕಾಬೂಲ್- 2ಕಪ್, ಈರುಳ್ಳಿ- 2, ಟೊಮ್ಯಾಟೋ-  2, ಉಪ್ಪು- ರುಚಿಗೆ ತಕ್ಕಂತೆ, ಕಾರದಪುಡಿ- 1ಚಮಚ, ಒಣಮೆಣಸು-2, ಅರಶಿನಪುಡಿ- ಸ್ವಲ್ಪ, ಗರಂಮಸಾಲ- ಅರ್ಧ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1ಚಮಚ, ಎಣ್ಣೆ- ಸ್ವಲ್ಪ.

ತಯಾರಿಸುವುದು ಹೇಗೆ?:  ಕಾಬೂಲನ್ನು ಸುಮಾರು ಐದಾರು ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ. ಆ ನಂತರ ಅದನ್ನು ಚೆನ್ನಾಗಿ ಬೇಯಿಸಿಟ್ಟುಕೊಳ್ಳಿ. ಇನ್ನೊಂದೆಡೆ ಪಾಲಕ್ ಸೊಪ್ಪನ್ನು ಹಚ್ಚಿಟ್ಟುಕೊಂಡು ಅದನ್ನು ಕುಕ್ಕರ್‌ ನಲ್ಲಿ ಸ್ವಲ್ಪ ನೀರು ಹಾಕಿ ಒಂದು ವಿಶಲ್ ನಷ್ಟು ಕೂಗಿಸಿ ಇಳಿಸಿಟ್ಟು ಬಳಿಕ ಅದನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು. ಇನ್ನೊಂದೆಡೆ ಈರುಳ್ಳಿ ಹಾಗೂ ಟೊಮ್ಯಾಟೋವನ್ನು ಹಚ್ಚಿಟ್ಟುಕೊಳ್ಳಬೇಕು.

ಆ ನಂತರ ಸ್ವೌವ್ ಮೇಲೆ ಪಾತ್ರೆಯಿಟ್ಟು ಅದಕ್ಕೆ ಎಣ್ಣೆ ಹಾಕಿ. ಅದು ಕಾದ ಬಳಿಕ ಹಚ್ಚಿಟ್ಟ ಈರುಳ್ಳಿ ಹಾಕಿ ಚೆನ್ನಾಗಿ  ಹುರಿಯಬೇಕು. ಅದು ಬೆಂದು ಕಂದು ಬಣ್ಣಕ್ಕೆ ಬರುತ್ತಿದ್ದಂತೆಯೇ ಟೊಮ್ಯಾಟೋ ಹಾಕಿ ಎರಡನ್ನು ಮಿಶ್ರ ಮಾಡಿ ಆ ನಂತರ ಅದಕ್ಕೆ ಪಾಲಕ್ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಹುರಿಯಬೇಕು. ಆ ನಂತರ ಕಾರದ ಪುಡಿ, ಗರಂಮಸಾಲ, ಉಪ್ಪು, ಅರಿಶಿನಪುಡಿ, ಒಣಮೆಣಸು ಹಾಕಿ ಎಲ್ಲವನ್ನು ಸೇರಿಸಿ ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಕುದಿಸಿ ಆ ನಂತರ ಅದಕ್ಕೆ ಮೊದಲೇ ಬೇಯಿಸಿಟ್ಟ ಕಾಬೂಲ್‌ನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿದರೆ ಪಾಲಕ್ ಕಾಬೂಲ್ ಮಸಾಲ ರೆಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು