News Karnataka Kannada
Monday, May 06 2024
ಅಡುಗೆ ಮನೆ

ಸುಲಭವಾಗಿ ಬಾಳೆಹಣ್ಣಿನ ಇಡ್ಲಿ ಮಾಡಿ ಸವಿಯಿರಿ

banana-idli
Photo Credit : Wikipedia

ಇಡ್ಲಿಯಲ್ಲಿ ಹಲವಾರು ವಿಧಗಳಿವೆ. ಉದಾಹರಣೆಗೆ ರವಾ ಇಡ್ಲಿ, ಓಟ್ಸ್ ಇಡ್ಲಿ, ಸಬ್ಬಕ್ಕಿ ಇಡ್ಲಿ ಮುಂತಾದವು ಮಾಡಿ ನೀವೂ ಸವಿದಿರಬಹುದು. ಅದರಂತೆ  ಇವತ್ತಿನ ರೆಸಿಪಿಯಲ್ಲಿ ಬಾಳೆಹಣ್ಣಿನ ಇಡ್ಲಿಯನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

ಬಾಳೆಹಣ್ಣಿನ ಇಡ್ಲಿಗೆ ಬೇಕಾಗುವ  ಸಾಮಗ್ರಿಗಳು:
ಇಡ್ಲಿ ಹಿಟ್ಟು – 1 ಕಪ್
ಬೆಲ್ಲದ ಪೌಡರ್ – 6 ಚಮಚ
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಏಲಕ್ಕಿ ಪುಡಿ – 1 ಚಿಟಿಕೆ
ಹೆಚ್ಚಿದ ಬಾಳೆಹಣ್ಣು – 1
ತೆಂಗಿನ ಹಾಲು – 1 ಕಪ್
ಮಾಡುವ ವಿಧಾನ:

ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ಇಡ್ಲಿ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ ಅದಕ್ಕೆ 4 ಚಮಚ ಬೆಲ್ಲದ ಪೌಡರ್, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಹೆಚ್ಚಿದ ಬಾಳೆಹಣ್ಣು ಹಾಗೂ ಏಲಕ್ಕಿ ಪುಡಿಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಇಡ್ಲಿ ಟ್ರೇಗೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಸವರಿಕೊಳ್ಳಿ. ಬಳಿಕ ಇಡ್ಲಿ ಹಿಟ್ಟಿನ ಮಿಶ್ರಣವನ್ನು ಇದರಲ್ಲಿ ಹಾಕಿ ಬೇಯಲು ಇಡಿ. ಬೆಂದ ನಂತರ ಒಂದು ಪ್ಲೇಟ್‌ನಲ್ಲಿ ತೆಗೆದಿಡಿ.
ನಂತರ ತೆಂಗಿನ ಹಾಲನ್ನು ಬಿಸಿ ಮಾಡಿ ಅದಕ್ಕೆ 2 ಚಮಚ ಬೆಲ್ಲದ ಪುಡಿಯನ್ನು ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ. ಈಗ ಇದನ್ನು ಸರ್ವಿಂಗ್ ಪ್ಲೇಟ್‌ನಲ್ಲಿ ಇರಿಸಿ ಇಡ್ಲಿ ಜೊತೆ ಸವಿಯಲು ಕೊಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು