ದೇಹ ತಂಪಾಗಿಸುವ ಗಸಗಸೆ ಪಾಯಸ ತಯಾರಿ ಹೇಗೆ?

ಬೇಸಿಗೆಯಲ್ಲಿ ಬಿಸಿಲ ಧಗೆಗೆ ದೇಹದ ಉಷ್ಣಾಂಶ ಹೆಚ್ಚಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಹೀಗಾಗಿ ದೇಹವನ್ನು ತಂಪಾಗಿಸಿ, ಕಣ್ತುಂಬ ನಿದ್ದೆಯನ್ನು ಕೊಡಬೇಕಾದರೆ ಗಸಗಸೆ ಬಳಕೆ ಅತಿ ಮುಖ್ಯವಾಗಿದೆ. ಹೀಗಾಗಿ ಗಸಗಸೆ ಪಾಯಸವನ್ನು ಮಾಡಿ ಸೇವಿಸಿದ್ದೇ ಆದರೆ ಆರೋಗ್ಯವಾಗಿರಲು ಸಾಧ್ಯವಾಗಲಿದೆ. ಹಾಗಾದರೆ ಪಾಯಸ ಮಾಡುವುದು ಹೇಗೆ?

ಬೇಕಾಗುವ ಪದಾರ್ಥಗಳು: ಗಸಗಸೆ- 1ಕಪ್, ಬಾದಾಮಿ- 7, ಅಕ್ಕಿ- 1ಚಮಚ, ಹಾಲು- ಅರ್ಧ ಲೀಟರ್, ಏಲಕ್ಕಿ- 5, ಸಕ್ಕರೆ- ಅರ್ಧ ಕಪ್, ತುಪ್ಪ- 2ಚಮಚ, ದ್ರಾಕ್ಷಿ, ಗೋಡಂಬಿ- ಸ್ವಲ್ಪ, ಕೇಸರಿ- ಸ್ವಲ್ಪ, ಜಾಯಿಕಾಯಿ ರಸ- ಸ್ವಲ್ಪ, ಲವಂಗ- 3

ತಯಾರಿಸುವ ವಿಧಾನ: ಮೊದಲಿಗೆ ಅಕ್ಕಿಯನ್ನು ನೆನೆಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ಕೇಸರಿಯನ್ನು ಹಾಲಿನಲ್ಲಿ  ಅದ್ದಿಟ್ಟುಕೊಳ್ಳಬೇಕು. ಮತ್ತೊಂದೆಡೆ ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ಇಷ್ಟು ಮಾಡಿದ ಬಳಿಕ ಗಸಗಸೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಇದರ ಜತೆಯಲ್ಲೇ ಬಾದಾಮಿಯನ್ನು ಹಾಕಿ ಹುರಿಯಬೇಕು. ನಂತರ ಬೇರೊಂದು ಪಾತ್ರೆಯಲ್ಲಿ ಕಾಯಿಸಿದ  ಹಾಲನ್ನು ತೆಗೆದಿಟ್ಟುಕೊಳ್ಳಬೇಕು.

ಎಲ್ಲವನ್ನು ತಯಾರು  ಮಾಡಿಟ್ಟುಕೊಂಡ  ಬಳಿಕ  ಹುರಿದ ಗಸಗಸೆ, ಬಾದಾಮಿ, ನೆನೆಸಿಟ್ಟ ಅಕ್ಕಿ, ಏಲಕ್ಕಿಯನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಬೇಕು. ಬಳಿಕ ತೆಗೆದು ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಕಾಯಿಸಿದ ಹಾಲನ್ನು ಸೇರಿಸಿ ನಿಧಾನ ಉರಿಯಲ್ಲಿ ಕುದಿಸಬೇಕು. ಕುದಿಯುವಾಗಲೇ ಸಕ್ಕರೆಯನ್ನು ಸೇರಿಸಬೇಕು. ತಳ ಹಿಡಿಯದಂತೆ ಮತ್ತು ಗಂಟು ಕಟ್ಟದಂತೆ ಮಾಡಲು ಸೌಟುನಿಂದ ತಿರುಗಿಸುತ್ತಿರಬೇಕು.

ಅದು ಚೆನ್ನಾಗಿ ಕುದಿಯುವಾಗ ಜಾಯಿಕಾಯಿ ರಸ ಮತ್ತು ಲವಂಗವನ್ನು ಹಾಕಬೇಕು. ಪಾಯಸ ಚೆನ್ನಾಗಿ ಕುದಿದ ಬಳಿಕ ಅದನ್ನು ಇಳಿಸಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಗೂ ಹಾಲಿನಲ್ಲಿ ಅದ್ದಿಟ್ಟ ಕೇಸರಿಯನ್ನು ಹಾಕಿ ಅಲಂಕರಿಸಿದರೆ ಘಮಘಮಿಸುವ ಗಸಗಸೆ ಪಾಯಸ ತಯಾರಾದಂತೆಯೇ…

Ashika S

Recent Posts

ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಚಿಕನ್​​ ಶವರ್ಮಾ ತಿಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, 19 ವರ್ಷದ ಯುವಕನೊಬ್ಬ ಚಿಕನ್ ಶವರ್ಮಾ…

16 mins ago

ಮೇ 11ರಿಂದ 13ರವರೆಗೆ ವಾಮಂಜೂರಿನಲ್ಲಿ ಕೃಷಿ ಮೇಳ, ದಶಮ ಸಂಭ್ರಮ

ಇದೇ ಮೇ 11ರಿಂದ 13ರವರೆಗೆ ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗ ಜರುಗಲಿದೆ ಎಂದು ಗುರುಪುರ ವ್ಯವಸಾಯ ಸೇವಾ ಸಹಕಾರಿ…

19 mins ago

ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂನಿಂದ ವಾಟ್ಸಾಪ್ ನಂಬರ್ ಬಿಡುಗಡೆ

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂ ಎಂಟು ಜಿಲ್ಲೆಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದ್ದು, ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಯ ಜನರು…

32 mins ago

ಎಸ್‌ಎಸ್‌ಎಲ್‌ಸಿ 2,3ನೇ ಪರೀಕ್ಷೆ ಬರೆಯುವವರಿಗೆ ಸ್ಪೆಷಲ್‌ ಕ್ಲಾಸ್‌ ಯೋಜನೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

36 mins ago

ಚುನಾವಣೆ ಮುಕ್ತಾಯದ ಬೆನ್ನಲ್ಲೇ ಆಕ್ಟಿವ್ ಆದ ಶಾಸಕ ಪ್ರಭು ಚವಾಣ್

ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ…

49 mins ago

ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ ಕೇಸ್‌ : ಇಬ್ಬರ ಬಂಧನ

ಶಾಸಕ ಇಕ್ಬಾಲ್‌ ಹಸೇನ್‌ ಅವರು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲ್‌ ಮಾಡಿದ್ದ ಆರೋಪದಡಿ…

51 mins ago