ಇವತ್ತಿನ ರೆಸಿಪಿಯಲ್ಲಿ ಅತ್ಯಂತ ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಹಾಗೂ ಮಕ್ಕಳಿಗೂ ಇಷ್ಟವಾಗುವಂತಹ ಕೆಟೊ ಮಗ್ ಕೇಕ್ ರೆಸಿಪಿ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು:
ಮೊಟ್ಟೆ – 3
ಸ್ವೀಟ್ನರ್ – 3 ಚಮಚ
ಕೋಕೋ ಪೌಡರ್ – 6 ಚಮಚ
ಮಾಡುವ ವಿಧಾನ: ಮೊದಲಿಗೆ ಒಂದು ಬೌಲ್ಗೆ ಮೊಟ್ಟೆ ಒಡೆದು ಹಾಕಿ. ಅದಕ್ಕೆ ಸ್ವೀಟ್ನರ್ ಹಾಗೂ ಕೋಕೋ ಪೌಡರ್ ಸೇರಿಸಿಕೊಂಡು ಗಂಟಿಲ್ಲದಂತೆ ಚನ್ನಾಗಿ ತಿರುವಿಕೊಳ್ಳಿ. ಒಂದು ಮಗ್ಗೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಸವರಿಕೊಂಡು, ಈ ಮಿಶ್ರಣವನ್ನು ಮಗ್ಗೆ ಹಾಕಿಕೊಂಡು 45 ಸೆಕೆಂಡ್ಗಳ ಕಾಲ ಮೈಕ್ರೋ ಓವನ್ನಲ್ಲಿ ಬೇಯಿಸಿಕೊಳ್ಳಿ.
ಈಗ ಬಿಸಿಬಿಸಿಯಾದ ಕೆಟೊ ಮಗ್ ಕೇಕ್ ಸವಿಯಲು ಸಿದ್ಧ.