ಮಹಾರಾಷ್ಟ್ರದ ವಿಶೇಷ ಚಟ್ನಿ: ಬೆಳ್ಳುಳ್ಳಿ ಒಣ ಚಟ್ನಿಪುಡಿ

ಮಹಾರಾಷ್ಟ್ರದ ಅತ್ಯಂತ ವಿಶೇಷವಾದ ಚಟ್ನಿಪುಡಿಗಳಲ್ಲಿ ಇದು ಒಂದು. ವಡಾ ಪಾವ್ ಜೊತೆಗೆ ಸವಿಯಲು ಬಳಸುವ ಈ ಚಟ್ನಿಯನ್ನ ದೋಸೆ ಜೊತೆಗೂ ಬಳಸಬಹುದು. ಇದನ್ನು ಸಾಮಾನ್ಯವಾಗಿ ವಡಾ ಪಾವ್ ಚಟ್ನಿ ಎಂದು ಕರೆಯಲಾಗುತ್ತದೆ. ಈ ಬೆಳ್ಳುಳ್ಳಿ ಒಣ ಚಟ್ನಿಯನ್ನು ಮಾಡುವ ವಿಧಾನ ಹೀಗಿದೆ.

ಬೇಕಾಗುವ ಪದಾರ್ಥಗಳು:

8 ಬೆಳ್ಳುಳ್ಳಿ ಲವಂಗ
1/2 ಕಪ್ ತುರಿದ ಒಣ ತೆಂಗಿನಕಾಯಿ
1 ಟೇಬಲ್ ಚಮಚ ಎಳ್ಳು
1 ಟೇಬಲ್ ಚಮಚ ಹುರಿದ ಕಡಲೆಕಾಯಿ (ನೆಲಗಡಲೆ)
2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1 ಟೀಸ್ಪೂನ್ ಕೊತ್ತಂಬರಿ ಪುಡಿ
1/2 ಟೀಸ್ಪೂನ್ ಹುಣಸೆ ಹಣ್ಣಿನ ಪೇಸ್ಟ್
1 ಟೀ ಚಮಚ ಎಣ್ಣೆ
ಉಪ್ಪು

ಮಾಡುವ ವಿಧಾನ:

ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಬೆಳ್ಳುಳ್ಳಿ ಎಸಳು, ತುರಿದ ತೆಂಗಿನಕಾಯಿ, ಎಳ್ಳು, ಕಡಲೆಕಾಯಿಯನ್ನು ಬೇರೆ ಬೇರೆಯಾಗಿ  ಸಣ್ಣ ಉರಿಯಲ್ಲಿ 1 ನಿಮಿಷ ಹುರಿದು ಒಂದು ಪ್ಲೇಟ್ ಗೆ ಹಾಕಿ  5 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಗ್ರೈಂಡರ್ ಜಾರ್ ಅಥವಾ ಫುಡ್ ಪ್ರೊಸೆಸರ್ ಜಾರ್ ನಲ್ಲಿ ಹುರಿದ ಎಲ್ಲಾ ಪದಾರ್ಥಗಳ ಜೊತೆಗೆ ಹುಣಸೆ ಪೇಸ್ಟ್, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಉಪ್ಪನ್ನು ಸೇರಿಸಿ ತರಿತರಿಯಾಗಿ ರುಬ್ಬಿಕೊಂಡರೆ ಬೆಳ್ಳುಳ್ಳಿ ಒಣ ಚಟ್ನಿ ಸವಿಯಲು ಸಿದ್ಧ. ಇದನ್ನು ಗಾಳಿಯಾಡದಂತೆ ಒಂದು ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಇಟ್ಟರೆ 15 ದಿನಗಳವರೆಗೆ ಸಂಗ್ರಹಿಸಿ ಇಡಬಹುದು.

Ashika S

Recent Posts

ಪಾಕ್ ಬಂದರಿನಲ್ಲಿ ಉಗ್ರರ ದಾಳಿ; 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ವಾದರ್​ನಲ್ಲಿ ಉಗ್ರ ದಾಳಿ ನಡೆದಿದ್ದು 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

3 mins ago

ಬೋಯಿಂಗ್ ನ್ಯಾಷನಲ್ ಏರೋ ಮಾಡೆಲಿಂಗ್ ಸ್ಪರ್ಧೆ: ಎನ್ಎಂಎಎಂ ಇನ್ಸ್ಟಿಟ್ಯೂಟ್‌ಗೆ ಪ್ರಥಮ

ಭಾರತದ 855 ಸಂಸ್ಥೆಗಳ 2,350 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ ಒಂಬತ್ತನೇ ವಾರ್ಷಿಕ ಬೋಯಿಂಗ್ ರಾಷ್ಟ್ರೀಯ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ…

5 mins ago

ಏರ್‌ ಇಂಡಿಯಾ 30 ಸಿಬ್ಬಂದಿಗಳ ವಜಾ : 74 ವಿಮಾನಗಳ ಹಾರಾಟ ರದ್ದು

ಸಾಮೂಹಿಕ ಅನಾರೋಗ್ಯದ ರಜೆ ತೆಗೆದುಕೊಂಡ ಏರ್‌ ಇಂಡಿಯಾದ 30 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ…

23 mins ago

ಎಸ್​ಎಸ್​ಎಲ್​​​ಸಿ ಫಲಿತಾಂಶ; ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಬೆಳ್ತಂಗಡಿ ವಿದ್ಯಾರ್ಥಿ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು…

32 mins ago

ರೇವಣ್ಣ ಲೈಂಗಿಕ ಹಗರಣ: ಮಹಿಳಾ ಕಾಂಗ್ರೆಸ್ ನಿಂದ ಪೊರಕೆ ಹಿಡಿದು ಪ್ರತಿಭಟನೆ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಖಂಡಿಸಿ ಹಾಗೂ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್…

39 mins ago

ಎಸ್ಎಸ್​ಎಲ್​ಸಿ ಫಲಿತಾಂಶ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಇಂದು 2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

52 mins ago