ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ಬಿರುಸಿನಿಂದ ನಡೆದಿದೆ. ಸ್ಯಾಂಡಲ್ವುಡ್ ಖ್ಯಾತ ನಟ ಹಾಗೂ ನಟಿಯರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಮತದಾನ ಮಾಡಿದ್ದಾರೆ. ಆದರೆ ಇದರ ಮಧ್ಯೆ ಸ್ಯಾಂಡಲ್ವುಡ್ನ ಇಬ್ಬರು ಖ್ಯಾತ ನಟಿಯರು ಮತ ಹಾಕಿಲ್ಲ.
ಹೌದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಸ್ಟಾರ್ ನಟ ನಟಿಯರು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಈ ಮಧ್ಯೆ ಸ್ಯಾಂಡಲ್ವುಡ್ ನಟಿ ರಮ್ಯಾ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಮತದಾನ ಮಾಡದೆ ಕರ್ತವ್ಯ ಮರೆತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಮತದಾನ ಹೊಂದಿದ್ದ ರಮ್ಯಾ ಅವರು ಮತದಾನ ಮಾಡದೇ ಕರ್ತವ್ಯ ಮರೆತಿದ್ದಾರೆ.
ಇತ್ತ ನಟಿ ರಶ್ಮಿಕಾ ಮಂದಣ್ಣ ಕೂಡ ವಿರಾಜಪೇಟೆಯಲ್ಲಿ ಮತವನ್ನು ಹೊಂದಿದ್ದು ಅವರು ಕೂಡ ಈ ಬಾರಿ ಮತದಾನ ಮಾಡಿಲ್ಲ. ಹೀಗಾಗಿ ಈ ಇಬ್ಬರು ಸ್ಟಾರ್ ನಟಿಯರ ಮೇಲೆ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ.