News Karnataka Kannada
Sunday, May 05 2024
ಅಡುಗೆ ಮನೆ

ಮನೆಯಲ್ಲಿಯೇ ಮಸಾಲೆ ರೋಟಿ ಮಾಡಲು ಇಲ್ಲಿದೆ ನೋಡಿ ಸರಳ ವಿಧಾನ

ಈಗ ಅಡುಗೆ ಮಾಡುವುದು ಬಹಳಷ್ಟು ಮಂದಿಗೆ ಖುಷಿ ಕೊಡುವ ವಿಚಾರ. ಹೆಚ್ಚಿನವರು ಏನಾದರೊಂದು ಅಡುಗೆ ಮಾಡಬೇಕೆಂದು ಬಯಸುತ್ತಲೇ ಇರುತ್ತಾರೆ. ಪ್ರತಿ ನಿತ್ಯದ ಪದಾರ್ಥಗಳ ನಡುವೆ ಹೊಸದು ಏನಾದರೊಂದು ಇರಲಿ ಎಂದು ಯೋಚಿಸುವವರು ಮಸಾಲೆ ರೋಟಿ ಮಾಡಬಹುದಾಗಿದೆ.
Photo Credit : News Kannada

ಈಗ ಅಡುಗೆ ಮಾಡುವುದು ಬಹಳಷ್ಟು ಮಂದಿಗೆ ಖುಷಿ ಕೊಡುವ ವಿಚಾರ. ಹೆಚ್ಚಿನವರು ಏನಾದರೊಂದು ಅಡುಗೆ ಮಾಡಬೇಕೆಂದು ಬಯಸುತ್ತಲೇ ಇರುತ್ತಾರೆ. ಪ್ರತಿ ನಿತ್ಯದ ಪದಾರ್ಥಗಳ ನಡುವೆ ಹೊಸದು ಏನಾದರೊಂದು ಇರಲಿ ಎಂದು ಯೋಚಿಸುವವರು ಮಸಾಲೆ ರೋಟಿ ಮಾಡಬಹುದಾಗಿದೆ.

ಬೇಕಾದ ಪದಾರ್ಥಗಳು

ಮೈದಾ ಹಿಟ್ಟು- 2ಬಟ್ಟಲು, ಈರುಳ್ಳಿ- 2, ಹಸಿಮೆಣಸಿಕಾಯಿ- 15 ಹಾಗೂ ಅಲ್ಪ ಪ್ರಮಾಣದಲ್ಲಿ ಕಾಳುಮೆಣಸು, ಬೆಳ್ಳುಳ್ಳಿ, ಶುಂಠಿಪೇಸ್ಟ್, ಚಕ್ಕೆ, ಲವಂಗ, ಏಲಕ್ಕಿ, ಗಸಗಸೆ, ನಿಂಬೆರಸ, ಜೀರಿಗೆ, ಕೊತ್ತಂಬರಿಸೊಪ್ಪು

ತಯಾರು ಮಾಡುವುದು ಹೇಗೆ?

ಮೊದಲಿಗೆ ಮೈದಾಹಿಟ್ಟಿಗೆ ನೀರು ಹಾಕಿ ಚಪಾತಿ ಮಾದರಿಯಲ್ಲಿ ಕಲಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ತೆಗೆದಿಟ್ಟುಕೊಂಡ ಮಸಾಲೆ ಪದಾರ್ಥಗಳಾದ ಈರುಳ್ಳಿ, ಹಸಿಮೆಣಸಿಕಾಯಿ, ಕಾಳುಮೆಣಸು, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಚಕ್ಕೆ, ಲವಂಗ, ಏಲಕ್ಕಿ, ಗಸಗಸೆ, ನಿಂಬೆರಸ, ಜೀರಿಗೆ, ಕೊತ್ತಂಬರಿಸೊಪ್ಪು ಎಲ್ಲವನ್ನು ಹಾಕಿ ರುಬ್ಬಬೇಕು. ಸ್ವಲ್ಪ ಪ್ರಮಾಣದ ಕಡ್ಲೆಹಿಟ್ಟು ತೆಗೆದುಕೊಂಡು ಅದಕ್ಕೆ ರುಬ್ಬಿದ ಮಸಾಲೆಯನ್ನು ಅದಕ್ಕೆ ಹಾಕಿ ಕಲಸಿ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಬೇಕು. ಬಳಿಕ ಮೊದಲು ಕಲೆಸಿಟ್ಟ ಮೈದಾ ಹಿಟ್ಟನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಲಟ್ಟಿಸಿ ಅದರೊಳಗೆ ಮಸಾಲೆಯ ಉಂಡೆಯನ್ನು ಹಾಕಬೇಕು. ಮತ್ತೆ ಒಬ್ಬಟ್ಟಿನ ರೀತಿ ಲಟ್ಟಿಸಿ ಬಳಿಕ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿದರೆ ಮಸಾಲೆ ರೋಟಿ ರೆಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು