ದೋಸೆ ಎಂದಾಗ ನಮಗೆ ವಿವಿಧ ಬಗೆಯ ದೋಸೆಗಳು ನೆನಪಾಗುತ್ತದೆ, ಮಸಾಲೆ ದೋಸೆ , ಸೆಟ್ ದೋಸೆ , ಪ್ಲೈನ್ ದೋಸೆ, ನೀರ್ ದೋಸೆ, ದಪ್ಪ ದೋಸೆ ಹೀಗೆ ಬಗೆ ಬಗೆಯ ದೋಸೆಯನ್ನು ತಿನ್ನುತ್ತೇವೆ.
ನೀರ್ ದೋಸೆ ಮಾಡುವ ವಿಧಾನ
ನೀರ್ ದೋಸೆ ಪ್ರೀಯರಿಗಾಗಿ ನೀರ್ ದೋಸೆ ಮಾಡುವ ವಿಧಾನ, 1 ಕಪ್ ಅಕ್ಕಿಯನ್ನು ನೆನೆಸಿಟ್ಟು, ನಂತರ ಆ ನೀರನ್ನು ಸಂಪೂರ್ಣವಾಗಿ ತೆಗೆದು ಹೆಚ್ಚು ನೀರು ಸೇರಿಸದೆ ಅದನ್ನು ರುಬ್ಬಿರಿ. ಅದಕ್ಕೆ 1 ಟೀಸ್ಪೂನ್ ಉಪ್ಪು ಮತ್ತು 2 ಕಪ್ ನೀರು ಸೇರಿಸಿ.
ಹಿಟ್ಟು ತೆಳುವಾಗುವವರೆಗೂ ಚೆನ್ನಾಗಿ ಮಿಶ್ರಣ ಮಾಡಿ.
ಕೊನೆಗೆ ಬಿಸಿ ತವಾ ಮೇಲೆ ದೋಸೆ ಹಿಟ್ಟು ಸುರಿದರೇ ರುಚಿಯಾದ ನೀರ್ ದೋಸೆ ಸವಿಯಬಹುದು.