ಮಾವಿನ ಹಣ್ಣು ಸೀಸನ್ ಆರಂಭ ಆದ್ರೆ ಎಲ್ಲರ ಮನೆಯಲ್ಲೂ ಮಾವಿನ ಹಣ್ಣಿನ ಹಪ್ಪಳ, ಮಾವಿನ ಕಾಯಿಯ ಚಟ್ನಿ, ಪದಾರ್ಥ ಹೀಗೆ ನಾನಾ ಬಗೆಯಲ್ಲಿ ಮಾಡುವುದು ಸಾಮಾನ್ಯ. ಇಂದು ನಾವು ಮಾವಿನ ಕಾಯಿಯ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಮಾವಿನಕಾಯಿಯ ಚಟ್ನಿ ಮಾಡಲು ಮೊದಲಿಗೆ ಮಾವಿನ ಕಾಯಿಯ ಸಿಪ್ಪೆ ತೆಗೆದು ಸಣ್ಣ ಸಣ್ಣ ಪೀಸ್ ಮಾಡಿಕೊಳ್ಳಿ ಅಥವಾ ತುರಿದುಕೊಳ್ಳ ಬಹುದು. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ತೆಂಗಿನ ಎಣ್ಣೆ (ಅಂದಾಜು) ಹಾಕಿ. ಅದು ಬಿಸಿಯಾಗುತ್ತಲೆ ಅದರಲ್ಲಿ ಒಣ ಮೆಣಸಿನಕಾಯಿ ಹುರಿದು ಕೊಳ್ಳಿ. ನಂತರ ಕಡಲೆಬೇಳೆ, ಉದ್ದಿನಬೇಳೆ, ಮೆಂತ್ಯೆ ಕಾಳು ಹಾಕಿ ಹುರಿದುಕೊಂಡು ಬಿಡಿ. ತದನಂತರ ಹುರಿದಿಟ್ಟ ಎಲ್ಲಾ ಸಾಮಗ್ರಿ ತನ್ನಗಾದ ನಂತರ ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ ಜೀರಿಗೆ, ಬೆಳ್ಳುಳ್ಳಿ, ಮಾವಿನಕಾಯಿ, ಉಪ್ಪು, ತೆಂಗಿನ ತುರಿ ಹಾಕಿ ಸ್ವಲ್ಪ ಬೆಲ್ಲ ಹಾಕಿ ರುಬ್ಬಿಕೊಳ್ಳಿ . ನಂತರ ಒಗ್ಗರಣೆ ರೆಡಿ ಮಾಡಿ ಅದಕ್ಕೆ ರುಬ್ಬಿಕೊಂಡ ಚಟ್ನಿಗೆ ಹಾಕಿ ಹುರಿದುಕೊಂಡರೆ ಮಾವಿನ ಕಾಯಿಯ ಚಟ್ನಿ ರೆಡಿ ಆಗುತ್ತದೆ.