ಬೇಕಾಗುವ ಪದಾರ್ಥಗಳು : ಬಲಿತ ಬಾಳೆಹಣ್ಣು-10, ಸಕ್ಕರೆ -1/ 4 ಕೆ.ಜಿ., ಏಲಕ್ಕಿ-10, ಗೊಡಂಬಿ-4, ತುಪ್ಪ-1ಲೋಟ
ಮಾಡುವ ವಿಧಾನ : ಬಾಳೆಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ತೆಗೆದು ಸಕ್ಕರೆ ಬೆರೆಸಿ, ನೀರಾಗುತ್ತದೆ. ಪಾತ್ರೆಗೆ ಹಾಕಿ ಕಾಯಿಸಿ ಅರ್ಧಗಂಟೆ ಕಳೆದಾಗ ಸ್ವಲ್ಪ ತುಪ್ಪ ಬೆರೆಸಿ ಸ್ವಲ್ಪ ಸ್ವಲ್ಪವೇ ತುಪ್ಪ ಹಾಕಿ ತಳ ಹಿಡಿಯದಂತೆ ತಿರುವಿ. 20 ನಿಮಿಷ ಆದ ಬಳಿಕ ತಳ ಬಿಟ್ಟು ಬರುತ್ತದೆ. ಆಗ ಅದು ಕಂದುಬಣ್ಣಕ್ಕೆ ಬರುತ್ತದೆ. ಆಗ ಏಲಕ್ಕಿ ಗೊಡಂಬಿ ಸೇರಿಸಿ ಒಂದು ತಟ್ಟೆಗೆ ತುಪ್ಪ ಸವರಿ ಹಾಕಿ ಕಟ್ ಮಾಡಿ.