ಕೊರಿಯಾದ ಸಾಂಪ್ರದಾಯಿಕ ಆಹಾರ ಕಿಮ್ಚಿ ಮಾಡುವುದು ಹೇಗೆ ?

ನಮ್ಮ ದೇಶದಲ್ಲಿ ಕೊರಿಯನ್ ಡ್ರಾಮಾ ಜೊತೆಗೆ ಕೊರಿಯನ್ ಹಾಡುಗಳು ಎಷ್ಟು ಪ್ರಚಲಿತದಲ್ಲಿವೆಯೋ ಅಷ್ಟೇ ಕೊರಿಯನ್ ಆಹಾರ ಕೂಡ. ಈ ಕೊರಿಯನ್ ಆಹಾರಗಳಲ್ಲಿ ಕಿಮ್ಚಿ ಕೂಡ ಒಂದು ಇದನ್ನು ನಾವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾಗಿದೆ.

ಕಿಮ್ಚಿ ಕೊರಿಯಾದ ಸಾಂಪ್ರದಾಯಿಕ ಮಾತ್ರವಲ್ಲದೆ ರಾಷ್ಟ್ರೀಯ ಆಹಾರವಾಗಿದೆ. ಈ ದೇಶದಲ್ಲಿ ಕಿಮ್ಚಿ ಇಲ್ಲದೇ ಊಟ ಸಂಪೂರ್ಣ ಆಗೋದೇ ಇಲ್ಲ.  ಒಂದು ಬಾರಿ ತಯಾರಿಸಿಡುವ ಕಿಮ್ಚಿಯನ್ನು ತಿಂಗಳ ವರೆಗೆ ಸಂಗ್ರಹಿಸಿ ಇಡಬಹುದು. ಅನ್ನ, ನೂಡಲ್ಸ್ ಅಥವಾ ಯಾವುದೇ ಅಡುಗೆಯೊಂದಿಗೂ ಇದನ್ನು ಸೈಡ್ ಡಿಶ್ ಆಗಿ ಸವಿಯಬಹುದು.

ಬೇಕಾಗುವ ಪದಾರ್ಥಗಳು:
ಚೈನೀಸ್ ಎಲೆಕೋಸು – 1 ಕೆಜಿ
ಕ್ಯಾರೆಟ್ – 1
ಮೂಲಂಗಿ – 1
ಉಪ್ಪು – 3 ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ – 8 ಟೀಸ್ಪೂನ್
ಬೆಳ್ಳುಳ್ಳಿ – 4 ಟೀಸ್ಪೂನ್
ಪ್ಲಮ್ ಸಾರ – 4 ಟೀಸ್ಪೂನ್
ಕಂದು ಸಕ್ಕರೆ – 3 ಟೀಸ್ಪೂನ್
ಫಿಶ್ ಸಾಸ್ – 8 ಟೀಸ್ಪೂನ್
ಎಳ್ಳು – 1 ಟೀಸ್ಪೂನ್
ಎಳ್ಳಿನ ಎಣ್ಣೆ – 1 ಟೀಸ್ಪೂನ್

ಮಾಡುವ ವಿಧಾನ: ಮೊದಲಿಗೆ ಎಲೆಕೋಸನ್ನು ಸ್ವಚ್ಛಗೊಳಿಸಿ, 4 ಅಥವಾ ಮಧ್ಯಮ ಗಾತ್ರದ ಭಾಗಗಳಾಗಿ ಕತ್ತರಿಸಿ. ಕ್ಯಾರೆಟ್ ಹಾಗೂ ಮೂಲಂಗಿ ಸಿಪ್ಪೆ ತೆಗೆದು ತೆಳ್ಳಗಿನ ಪಟ್ಟಿಗಳಾಗಿ ಕತ್ತರಿಸಿಕೊಳ್ಳಿ.

ಎಲೆಕೋಸು, ಕ್ಯಾರೆಟ್ ಹಾಗೂ ಮೂಲಂಗಿ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ, ಕೈಗಳಿಂದ ಚೆನ್ನಾಗಿ ಹರಡಿಕೊಳ್ಳಿ. ನಂತರ ಅದಕ್ಕೆ 30 ನಿಮಿಷ ವಿಶ್ರಾಂತಿ ನೀಡಿ. ಬಳಿಕ ಅದರಲ್ಲಿರುವ ಹೆಚ್ಚಿನ ನೀರಿನಂಶವನ್ನು ತೆಗೆದುಹಾಕಲು 3-4 ಬಾರಿ ತೊಳೆಯಿರಿ.

ಒಂದು ಬೌಲ್‌ನಲ್ಲಿ ಚಿಲ್ಲಿ ಫ್ಲೇಕ್ಸ್, ಕೊಚ್ಚಿದ ಬೆಳ್ಳುಳ್ಳಿ, ಫಿಶ್ ಸಾಸ್, ಪ್ಲಮ್ ಸಾರ ಮತ್ತು ಸಕ್ಕರೆಯನ್ನು ಹಾಕಿ ಪೇಸ್ಟ್ ಆಗಿ ಮಿಶ್ರಣ ಮಾಡಿ.

ಒಂದು ದೊಡ್ಡ ಪಾತ್ರೆಯಲ್ಲಿ ಎಲೆಕೋಸು, ಕ್ಯಾರೆಟ್ ಹಾಗೂ ಮೂಲಂಗಿ ಹಾಕಿ, ತಯಾರಿಸಿಟ್ಟ ಪೇಸ್ಟ್ ಅನ್ನು ಅದಕ್ಕೆ ಸೇರಿಸಿ, ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಗಟ್ಟಿ ಮುಚ್ಚಳವಿರುವ ಪಾತ್ರೆಗೆ ಈ ಮಿಶ್ರಣವನ್ನು ಹಾಕಿ, ಹುದುಗಲು ಬಿಟ್ಟರೆ ರುಚಿಯಾದ ಕಿಮ್ಚಿ ರೆಡಿ.

Ashika S

Recent Posts

ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಒಂದು ಹ್ಯಾಟ್ಸ್ ಅಪ್

ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ಅಪರಿಚಿತ ವಾಹನವೊಂದರ ಇಂಜಿನ್ ಆಯಿಲ್‌ ಲೀಕ್ ಆಗಿ ರಸ್ತೆಯ…

7 mins ago

ಮಲ್ಪೆಯಲ್ಲಿ ಸಮುದ್ರದ ಅಲೆಗಳ ಆರ್ಭಟ ಹೆಚ್ಚಳ : ವಾಟರ್ ಸ್ಪೋರ್ಟ್ಸ್ ಸ್ಥಗಿತ

ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮುಂದಿನ ಆದೇಶದವರೆಗೆ ಮಲ್ಪೆಯಲ್ಲಿ ಎಲ್ಲ ರೀತಿಯ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಲಾಗಿದೆ.

15 mins ago

ಫೇಲ್​ ಆದ ವಿದ್ಯಾರ್ಥಿಗಳೇ ಟೆನ್ಶನ್​ ಬೇಡ; ಮರು ಪರೀಕ್ಷೆಯ ದಿನಾಂಕ ಪ್ರಕಟ

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ,…

21 mins ago

ಪರೀಕ್ಷೆ ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದ ವಿದ್ಯಾರ್ಥಿ : ಪೋಷಕರ ಹುಡುಕಾಟ

ಇಂದು ರಾಜ್ಯದೆಲ್ಲಡೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ಹಿನ್ನಲೆ ವಿದ್ಯಾರ್ಥಿನೋರ್ವ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾಗಿದ್ದಾನೆ. ಘಟನೆ ಬೆಂ.ಗ್ರಾಮಾಂತರ ಜಿಲ್ಲೆ…

35 mins ago

ಮಧ್ಯರಾತ್ರಿ ಸ್ನೇಹಿತರ ಎಣ್ಣೆ ಪಾರ್ಟಿ : ಬಾಟಲಿಯಿಂದ ಹೊಡೆದು ಓರ್ವನ ಕೊಲೆ

ಬಾಟಲಿಯಿಂದ ಹೊಡೆದು ಯುವಕನೋರ್ವನ ಕೊಲೆ ಮಾಡಿರುವ ಘಟನೆ ಮುಂಡರಗಿ ತಾಲೂಕಿನ ಕೆಎಚ್​ಬಿ ಹೊಸ ಕಾಲೊನಿಯಲ್ಲಿ ನಡೆದಿದೆ.ಕೊಪ್ಪಳದ ಹೈದರ್ ತಾಂಡಾದ ನಿವಾಸಿ…

52 mins ago

ಪಾಕ್ ಬಂದರಿನಲ್ಲಿ ಉಗ್ರರ ದಾಳಿ; 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ವಾದರ್​ನಲ್ಲಿ ಉಗ್ರ ದಾಳಿ ನಡೆದಿದ್ದು 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

1 hour ago