News Karnataka Kannada
Sunday, May 05 2024
ಅಡುಗೆ ಮನೆ

ಬ್ರೆಡ್ ಮಸಾಲೆ ದೋಸೆ ಸುಲಭವಾಗಿ ಮಾಡೋದು ಹೇಗೆ?

How to make bread masala dosa easily?
Photo Credit : News Kannada

ಮಹಿಳೆಯರಿಗೆ ಬೆಳಗಿನ ತಿಂಡಿಗೆ ಏನು ಮಾಡೋದು ಅಂತಾನೇ ಒಂದು ದೊಡ್ಡ ಚಿಂತೆ ಈ ಚಿಂತೆಗೆ ಇಲ್ಲಿದೆ ಸುಲಭ ಪರಿಹಾರ. ಅದುವೇ ಸುಲಭವಾಗಿ ತಯಾರಾಗುವ ಬ್ರೆಡ್ ಮಸಾಲೆ ದೋಸೆ. ಅದನ್ನು ಸುಲಭವಾಗಿ ಮಾಡೋದು ಹೇಗೆ ಅಂತ ನೋಡೋಣ..

ಬೇಕಾಗುವ ಪದಾರ್ಥಗಳು

  • ಬ್ರೆಡ್ ಸ್ಲೈಸ್ ಗಳು- 8-10
  • ಬಾಂಬೆ ರವೆ- ಅರ್ಧ ಬಟ್ಟಲು
  • ಅಕ್ಕಿ ಹಿಟ್ಟು- 2 ಚಮಚ
  • ಮೊಸರು- ಕಾಲು ಬಟ್ಟಲು
  • ಉಪ್ಪು-ರುಚಿಗೆ ತಕ್ಕಷ್ಟು
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಆಲೂಗಡ್ಡೆ ಪಲ್ಯ- ಸ್ವಲ್ಪ
  • ಸ್ವಲ್ಪ-ಬೆಣ್ಣೆ

ಮಾಡುವ ವಿಧಾನ

ಬ್ರೆಡ್ ಸ್ಲೈಸ್ ತೆಗೆದುಕೊಂಡು ನಾಲ್ಕೂ ಬದಿಯನ್ನು ಕತ್ತರಿಸಿ ಕೈಗಳಿಂದ ಬ್ರೆಡ್ ಅನ್ನು ಪುಡಿ ಪುಡಿ ಮಾಡಿ, ಅದಕ್ಕೆ ಅರ್ಧ ಬಟ್ಟಲು ರವೆ, ಅಕ್ಕಿ ಹಿಟ್ಟು, ಮೊಸರು, ಉಪ್ಪು ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 20-30 ನಿಮಿಷ ನೆನೆಯಲು ಬಿಡಿ. ನಂತರ ಮಿಕ್ಸಿ ಜಾರಿನಲ್ಲಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.

ಒಲೆಯ ಮೇಲೆ ದೋಸೆ ಕಾವಲಿ ಇಟ್ಟು ಬಿಸಿ ಮಾಡಿ, ನಂತರ ದೋಸೆ ಹಿಟ್ಟನ್ನು ತೆಳ್ಳಗೆ ಹೊಯ್ದು ಅದರ ಸುತ್ತಲೂ ಒಂದು ಚಮಚ ಎಣ್ಣೆ ಹಾಕಿ, ಮಧ್ಯದಲ್ಲಿ ಆಲೂಗಡ್ಡೆ ಪಲ್ಯ ಹಾಕಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಬೇಯಿಸಿ. ದೋಸೆ ಗರಿಗರಿಯಾದ ಮೇಲೆ ಪೋಲ್ಡ್ ಮಾಡಿ ತೆಗೆಯಿರಿ. ಇದೀಗ ಬ್ರೆಡ್ ಮಸಾಲೆ ದೋಸೆ ಸವಿಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು