ಸಾಮಾನ್ಯವಾಗಿ ಭಾನುವಾರ ಎಲ್ಲರು ಮನೆಯಲ್ಲಿ ಕೂತು ಹರಟೆ ಹೊಡಿಯೊ ಸಮಯ, ಈ ಸಮಯದಲ್ಲಿ ಏನಾದ್ರೂ ವಿಶೇಷ ಅಡುಗೆ ಮಾಡಬೇಕೆಂದು ಬಯಸುವ ನಾನ್ವೆಜ್ ಪ್ರಿಯರು ಫಿಶ್ ಫ್ರೈ ಮಾಡಿ.
ಫಿಶ್ ಫ್ರೈ ಮಾಡಲು ಒಂದು ಮಿಕ್ಸಿಂಗ್ ಬೌಲ್ಗೆ ಅರಿಶಿನ, ಖಾರದ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಹೋಳು ನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ. ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ, ನಂತರ ಈ ಮಿಶ್ರಣಕ್ಕೆ ತೊಳೆದ ಮೀನಿನ ಪೀಸ್ಗಳನ್ನು ಸೇರಿಸಿ. ಫಿಶ್ಪೀಸ್ ಮೇಲೆ ಲೇಪಿಸಿಕೊಳ್ಳಿ. ಸ್ವಲ್ಪ ಸಮಯ ಹಾಗೆ ಬಿಟ್ಟು ಪ್ಯಾನ್ಗೆ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಫಿಶ್ ಪೀಸ್ಗಳನ್ನು ಹಾಕಿ ಎರಡೂ ಬದಿ ಚೆನ್ನಾಗಿ ಫೈ ಮಾಡಿ. ನಂತರ ಸವಿಯಿರಿ.