ಕಿವಿ ಹಣ್ಣು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಉಂಟಾಗುವ ಹಲವಾರು ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ತೂಕ ಇಳಿಸಲು ನೆರವಾಗುತ್ತದೆ ಹೀಗೆ ನಾನಾ ರೀತಿಯಲ್ಲಿ ಸಹಕಾರಿಯಾಗಿದೆ.
ಕಿವಿ ಹಣ್ಣಿನ ಜ್ಯೂಸ್ ಮಾಡುವ ವಿಧಾನ
ಕಿವಿ ಹಣ್ಣಿನ ಸಿಪ್ಪೆ ತೆಗೆದು ಅದನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಇಡಿ. ನಂತರ ಸಕ್ಕರೆ ಮತ್ತು ನೀರನ್ನು ಹಾಕಿ ರುಬ್ಬಿ ಕೊಂಡು ಒಂದು ಗ್ಲಾಸ್ ಗೆ ಹಾಕಿ. ಅದಕ್ಕೆ ಸ್ವಲ್ಪ ಉಪ್ಪು ಮತ್ತು ಐಸ್ ಹಾಕಿ ಕುಡಿಯಿರಿ. ಹೀಗೆ ಕೆಲವೇ ನಿಮಿಷಗಳಲ್ಲಿ ಈ ಕಿವಿ ಹಣ್ಣಿನ ಜ್ಯೂಸ್ ತಯಾರಿಸಬಹುದು.