News Karnataka Kannada
Thursday, May 09 2024
ಅಡುಗೆ ಮನೆ

ಸುಲಭವಾದ ಗೋಬಿ ಪೆಪ್ಪರ್ ಡ್ರೈ ರೆಸಿಪಿ ಇಲ್ಲಿದೆ

ವೆಜ್ ಪ್ರಿಯರಿಗೆ ನಾನ್ ವೆಜ್ ರೀತಿಯಲ್ಲಿ ಸುಲಭವಾಗಿ ಮಾಡಬಹುದಾದಂತಹ ಗೋಬಿ ಪೆಪ್ಪರ್ ಡ್ರೈ ಮನೆಯಲ್ಲಿಯೇ ಸಂಜೆಯ ಚಹಾದೊಟ್ಟಿಗೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.ಇವತ್ತಿನ ನಮ್ಮ ರೆಸಿಪಿಯಲ್ಲಿ ಗೋಬಿ ಪೆಪ್ಪರ್ ಡ್ರೈ ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.
Photo Credit : News Kannada

ವೆಜ್ ಪ್ರಿಯರಿಗೆ ನಾನ್ ವೆಜ್ ರೀತಿಯಲ್ಲಿ ಸುಲಭವಾಗಿ ಮಾಡಬಹುದಾದಂತಹ ಗೋಬಿ ಪೆಪ್ಪರ್ ಡ್ರೈ ಮನೆಯಲ್ಲಿಯೇ ಸಂಜೆಯ ಚಹಾದೊಟ್ಟಿಗೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.ಇವತ್ತಿನ ನಮ್ಮ ರೆಸಿಪಿಯಲ್ಲಿ ಗೋಬಿ ಪೆಪ್ಪರ್ ಡ್ರೈ ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿಗಳು:
ಹೂಕೋಸು – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಮೈದಾ – 1 ಕಪ್
ಜೋಳದ ಹಿಟ್ಟು – ಮುಕ್ಕಾಲು ಕಪ್
ಅರಶಿಣ ಪೌಡರ್ – ಅರ್ಧ ಚಮಚ
ಪೆಪ್ಪರ್ ಪೌಡರ್ – 1 ಚಮಚ
ಎಣ್ಣೆ – 2 ಚಮಚ
ಜೀರಿಗೆ – ಅರ್ಧ ಚಮಚ
ಫೆನ್ನೆಲ್ – ಅರ್ಧ ಚಮಚ
ಕರಿಬೇವು – ಸ್ವಲ್ಪ
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಬೆಳ್ಳುಳ್ಳಿ – 5
ಹೆಚ್ಚಿದ ಶುಂಠಿ – ಸ್ವಲ್ಪ
ಹೆಚ್ಚಿದ ಕ್ಯಾಪ್ಸಿಕಂ – ಅರ್ಧ
ಜೀರಾ ಪೌಡರ್ – ಅರ್ಧ ಚಮಚ
ಟೊಮೆಟೊ ಸಾಸ್ – 2 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ

ಮಾಡುವ ವಿಧಾನ: ಮೊದಲಿಗೆ ಹೆಚ್ಚಿದ ಹೂಕೋಸನ್ನು ಬಿಸಿನೀರಿಗೆ ಉಪ್ಪು ಹಾಕಿ ಸ್ವಲ್ಪ ಹೊತ್ತು ನೆನೆಸಿಡಿ. ಬಳಿಕ ನೀರಿನಿಂದ ಹೂಕೋಸು ಅನ್ನು ತೆಗೆದು ಪಕ್ಕಕ್ಕೆ ಇಡಿ.

ಈಗ ಒಂದು ಬೌಲ್‌ನಲ್ಲಿ 1 ಕಪ್ ಮೈದಾ, ಮುಕ್ಕಾಲು ಕಪ್ ಜೋಳದ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ ಅದಕ್ಕೆ ಅರಶಿಣ, ಪೆಪ್ಪರ್ ಪೌಡರ್ ಮತ್ತು ಸ್ವಲ್ಪ ಉಪ್ಪನ್ನು ಹಾಕಿಕೊಂಡು ಅದಕ್ಕೆ 1 ಕಪ್ ನೀರನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿ ಹೂಕೋಸನ್ನು ಈ ಮಿಶ್ರಣಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಒಂದು ಬಾಣಾಲೆಯಲ್ಲಿ ಎಣ್ಣೆಯನ್ನು ಬಿಸಿಗಿಟ್ಟು ಎಣ್ಣೆ ಕಾದ ಬಳಿಕ ಅದಕ್ಕೆ ಹೂಕೋಸನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದೇ ರೀತಿ ಎಲ್ಲವನ್ನೂ ಮಾಡಿಕೊಳ್ಳಿ.

ಈಗ ಒಂದು ಪ್ಯಾನ್‌ಗೆ 2 ಚಮಚ ಎಣ್ಣೆ, ಜೀರಿಗೆ ಮತ್ತಿ ಫನ್ನೆಲ್ ಹಾಕಿಕೊಳ್ಳಿ. ಬಳಿಕ ಅದಕ್ಕೆ ಕರಿಬೇವುಗಳನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಕ್ಯಾಪ್ಸಿಕಂ ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ.

ಬಳಿಕ ಇದಕ್ಕೆ ಅರಶಿಣ ಪುಡಿ, ಜೀರಾ ಪುಡಿ, ಕೊತ್ತಂಬರಿ ಪುಡಿ, ಪೆಪ್ಪರ್ ಪೌಡರ್ ಮತ್ತು ಸ್ವಲ್ಪ ಉಪ್ಪನ್ನು ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ. ಈಗ ಇದಕ್ಕೆ ಸ್ವಲ್ಪ ಟೊಮೆಟೊ ಸಾಸ್ ಹಾಕಿಕೊಂಡು,  ಈ ಮಿಶ್ರಣಕ್ಕೆ ಹುರಿದ ಗೋಬಿಯನ್ನು ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿಕೊಂಡರೆ ಬಿಸಿ ಬಿಸಿಯಾದ ಗೋಬಿ ಪೆಪ್ಪರ್ ಡ್ರೈ ಸವಿಯಲು ಸಿದ್ದ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು