ಕ್ಯಾರೆಟ್ ಹಲ್ವಾ ಅತ್ಯುತ್ತಮ ಭಾರತೀಯ ಸಿಹಿ ತಿಂಡಿಗಳಲ್ಲಿ ಒಂದು. ಕ್ಯಾರೆಟ್ ಮತ್ತು ಹಾಲಿನಿಂದ ತಯಾರಿಸಿದ ರುಚಿಕರವಾದ ಸಿಹಿತಿಂಡಿ ಬಹುಬೇಗನೆ ತಯಾರಾಗುತ್ತದೆ ಅದರ ಸುಲಭ ಪಾಕ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
2 ಕಪ್ ತುರಿದ ಕ್ಯಾರೆಟ್
1 1/2 ಕಪ್ ಹಾಲು
2 1/2 ಟೇಬಲ್ ಚಮಚ ತುಪ್ಪ
1/4 ಕಪ್ ಸಕ್ಕರೆ
5 ಕತ್ತರಿಸಿದ ಗೋಡಂಬಿ ಬೀಜಗಳು
5 ಕತ್ತರಿಸಿದ ಬಾದಾಮಿ
8 ಒಣದ್ರಾಕ್ಷಿ
1/4 ಟೀ ಚಮಚ ಏಲಕ್ಕಿ ಪುಡಿ
ಮಾಡುವ ವಿಧಾನ:
ಪ್ಯಾನ್ ಅನ್ನು ಒಲೆಯ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಅದಕ್ಕೆ ತುರಿದ ಕ್ಯಾರೆಟ್ ಸೇರಿಸಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಹುರಿಯಿರಿ. ಇದಕ್ಕೆ ತುಪ್ಪ ಹಾಗೂ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ. ನಂತರ ಹಾಲು ದಪ್ಪಗಾಗುತ್ತಿದ್ದಂತೆ ಇದಕ್ಕೆ ಸಕ್ಕರೆ ಕತ್ತರಿಸಿದ ಗೋಡಂಬಿ ಹಾಗೂ ಒಣದ್ರಾಕ್ಷಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಕರಗುವವರೆಗೆ ಬೇಯಿಸಿ ನಂತರ ಗ್ಯಾಸ್ ಆಫ್ ಮಾಡಿ ಏಲಕ್ಕಿ ಪುಡಿಯನ್ನು ಸೇರಿಸಿ ಅದನ್ನ ಸರ್ವಿಂಗ್ ಬೌಲ್ ಗೆ ವರ್ಗಾಯಿಸಿ ಅದರ ಮೇಲೆ ಕತ್ತರಿಸಿದ ಬಾದಾಮಿ ತುಂಡುಗಳಿಂದ ಅಲಂಕರಿಸಿದರೆ ರುಚಿ ರುಚಿಯಾದ ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧ