ಹರಿಯಾಣದ ಪಂಚಕುಲದಲ್ಲಿ ಕ್ರಿಕೆಟರ್ ಯುವರಾಜ್ ಸಿಂಗ್ ಅವರ ತಾಯಿ ವಾಸವಿದ್ದ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಕಬೋರ್ಡ್ನಲ್ಲಿ ಸುಮಾರು 75,000 ರೂ. ನಗದು ಮತ್ತು ಆಭರಣ ಕಳವು ಮಾಡಲಾಗಿದೆ ಎಂದು ಯುವಿ ತಾಯಿ ಶಭ್ನಮ್ ಸಿಂಗ್ ತಿಳಿಸಿದ್ದಾರೆ.
ಯುವಿ ಮನೆಯಲ್ಲಿ ಕೆಲಸ ಮಾಡುವ ಕೆಲವು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಮನೆಯ ಸಹಾಯಕಿ ಲಲಿತಾ ದೇವಿ, ಅಡುಗೆ ಸಿಬ್ಬಂದಿ ಸಿಲ್ದರ್ ಪಾಲ್ ಮೇಲೆ ಅನುಮಾನ ಇದೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.