News Karnataka Kannada
Friday, May 03 2024
ಅಡುಗೆ ಮನೆ

ಹಬ್ಬದಂದು ಮನೆಯಲ್ಲಿಯೇ ಮಾಡಿ ಸವಿಯಿರಿ ಬೇಳೆ ಒಬ್ಬಟ್ಟು

Photo Credit :

ಹಬ್ಬದಂದು ಮನೆಯಲ್ಲಿಯೇ ಮಾಡಿ ಸವಿಯಿರಿ ಬೇಳೆ ಒಬ್ಬಟ್ಟು

ಒಬ್ಬಟ್ಟು ಅಥವಾ ಹೋಲಿಗೆ ಕರ್ನಾಟಕದ ಪ್ರತಿಯೊಂದು ಹಬ್ಬದಲ್ಲಿಯೂ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಕೆಲವೊಂದು ಹಬ್ಬದಲ್ಲಿ ಒಬ್ಬಟ್ಟಿದ್ದರೆ ಮಾತ್ರ ಹಬ್ಬಕ್ಕೆ ವಿಶೇಷ ಕಲೆ ಬರುತ್ತದೆ. ಅದರಲ್ಲಿಯೂ ಮನೆಯಲ್ಲಿ ತಯಾರಿಸುವ ಒಬ್ಬಟ್ಟು ಸವಿಯಲು ಮತ್ತಷ್ಟು ರುಚಿಕರವಾಗಿರುತ್ತದೆ. ಬೇಳೆ ಒಬ್ಬಟ್ಟನ್ನು ಮನೆಯಲ್ಲಿ ತುಂಬಾ ಸಿಂಪಲ್ ಆಗಿ ರುಚಿಕರವಾಗಿ ಹಬ್ಬಕ್ಕೆ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು
ತೊಗರಿ ಬೇಳೆ- 2 ಕಪ್
ಬೆಲ್ಲ- 2 ಕಪ್
ಕಾಯಿ ತುರಿ- 2 ಕಪ್
ಏಲಕ್ಕಿ ಪುಡಿ-ಸ್ವಲ್ಪ
ಮೈದಾ- 2 ಕಪ್
ಎಣ್ಣೆ
ತುಪ್ಪ
ಹರಿಶಿನ
ರುಚಿಗೆ ಉಪ್ಪು

ಮಾಡುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ರುಚಿಗೆ ಉಪ್ಪು, ಸ್ವಲ್ಪ ಹರಿಶಿನ ಹಾಕಿ ಚಪಾತಿ ಹಿಟ್ಟಿನ ಹಾಗೇ ಮೈದಾ ಹಿಟ್ಟನ್ನು ನೀರು ಹಾಕಿ ಹಿಟ್ಟನ್ನು ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಅದನ್ನು 3 ಗಂಟೆಗಳ ಕಾಲ ಹಾಗೆಯೇ ಬಿಡಿ. ಇನ್ನೊಂದು ಪಾತ್ರೆಯಲ್ಲಿ ತೊಗರಿಬೇಳೆಯನ್ನು ಬೇಯಲು ಇಟ್ಟು ಅದು ಬೇಯಿಸಿ.

ಆ ಬಳಿಕ ಬೇಯಿಸಿಟ್ಟ ತೊಗರಿಬೇಳೆಗೆ ಬೆಲ್ಲ, ಕಾಯಿತುರಿ ಹಾಗೂ ಏಲಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ. ಮಿಶ್ರಣ ತಣ್ಣಗಾದ ಬಳಿಕ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ. ಈಗ ಕೈಗೆ ಸ್ವಲ್ಪ ಎಣ್ಣೆ ಹಾಕಿ ಕಲಸಿಟ್ಟ ಮೈದಾ ಹಿಟ್ಟನ್ನು ಕೈ ಮೇಲೆ ಚಿಕ್ಕದಾಗಿ ಬಿಡಿಸಿ ಮಧ್ಯದಲ್ಲಿ ಮಿಕ್ಸ್ ಮಾಡಿ ಇಟ್ಟುಕೊಂಡ ಸ್ವಲ್ಪ ಮಿಶ್ರಣವನ್ನು ಇಟ್ಟು ಎಲ್ಲಾ ಬದಿಯಿಂದ ಮೇಲ್ಮುಖವಾಗಿ ಮೈದಾ ಹಿಟ್ಟಿನಿಂದ ಹೂರಣವನ್ನು ಮುಚ್ಚಿ.

ನಂತರ ಪ್ಲಾಸ್ಟಿಕ್ ನ ಮೇಲೆ ಸ್ವಲ್ಪ ಎಣ್ಣೆಯನ್ನು ಸವರಿ ಹೂರಣವನ್ನು ಇಟ್ಟು ನಿಧಾನವಾಗಿ ಕೈಯಿಂದಲೇ ಲಟ್ಟಿಸಿ. ಒಲೆ ಮೇಲೆ ತವಾ ಇಟ್ಟು ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ. ತವಾ ಬಿಸಿಯಾದ ನಂತರ ಅದರ ಮೇಲೆ ತಟ್ಟಿಕೊಂಡ ಒಬ್ಬಟ್ಟು ಹಾಕಿ ಎರಡೂ ಬದಿ ಹದವಾಗಿ ಬೇಯಿಸಿದ್ರೆ ಬೇಳೆ ಒಬ್ಬಟ್ಟು ರೆಡಿ.
ಇದನ್ನು ಬಿಸಿ ಇರುವಾಗಲೇ ತುಪ್ಪ ಅಥವಾ ಬಿಸಿ ಮಾಡಿದ ಹಾಲಿನೊಂದಿಗೆ ಸವಿಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು