News Karnataka Kannada
Sunday, May 05 2024
ಅಡುಗೆ ಮನೆ

ಸೋರೆಕಾಯಿ ಬರ್ಫಿ

Photo Credit :

ಸೋರೆಕಾಯಿ ಬರ್ಫಿ

ಹೆಚ್ಚು ಕೊಬ್ಬಿಲ್ಲದ ತರಕಾರಿ ಎಂದೇ ಕರೆಯಿಸಿಕೊಂಡಿರುವ ಸೋರೆಕಾಯಿ ವಿಟಮಿನ್ ಸಿ ಮತ್ತು ಇತರ ನ್ಯೂಟ್ರೀಶಿಯಸ್ ಅಂಶಗಳನ್ನು ಒಳಗೊಂಡಿವೆ. ತುಪ್ಪ, ಹಾಲು, ಕೋವಾ ಬೆರೆಸಿ ರುಚಿಕರವಾಗಿ ಸೋರೆಕಾಯಿ ಬರ್ಫಿ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು
*ಸೋರೆಕಾಯಿ – 2 ಕಪ್ಸ್ (ತುರಿದದ್ದು)
*ತುಪ್ಪ – 1/4 ಕಪ್
*ಹಾಲು – 1 ಕಪ್
*ಕೋಯಾ – 1 1/2 ಕಪ್
*ಹಸಿರು ಏಲಕ್ಕಿ ಹುಡಿ – 1 ಚಮಚ
*ಲವಂಗ – 2
*ಸಕ್ಕರೆ – 2 ಕಪ್
*ಮಿಶ್ರ ಮಾಡಿದ ನಟ್ಸ್ – (ಬಾದಾಮಿ, ದ್ರಾಕ್ಷಿ, ಗೇರುಬೀಜ, ಆಕ್ರೋಡು, ನೆಲಗಡಲೆ) – 1/2 ಕಪ್ ಕತ್ತರಿಸುವಂತಹದ್ದು
*ತುರಿದ ತೆಂಗಿನ ಕಾಯಿ – 1/2 ಕಪ್
*ಸೂರ್ಯಕಾಂತಿ ಬೀಜ – 1 ಚಮಚ
*ಮೆಲನ್ ಬೀಜ – 1 ಚಮಚ                     
ಮಾಡುವ ವಿಧಾನ:  ನೆಲಗಡಲೆ ಸಿಪ್ಪೆ ಸುಲಿದುಕೊಂಡು ಬೀಜವನ್ನು ಬಿಡಿಸಿ. ಇನ್ನು ಸೋರೆಕಾಯಿ ಚೆನ್ನಾಗಿ ತುರಿದುಕೊಳ್ಳಿ. ಪ್ಯಾನ್ ತೆಗೆದುಕೊಂಡು ತುಪ್ಪ ಕರಗಿಸಿಕೊಳ್ಳಿ. ಏಲಕ್ಕಿ ಮತ್ತು ಲವಂಗವನ್ನು ಇದಕ್ಕೆ ಹಾಕಿ ನಂತರ ತುರಿದ ಸೋರೆಕಾಯಿ ಮಿಶ್ರ ಮಾಡಿಕೊಳ್ಳಿ. ಸೋರೆಕಾಯಿಯಿಂದ ತುಪ್ಪ ಬೇರ್ಪಡುವವರೆಗೆ ಬೇಯಿಸಿ. ಇನ್ನು ತೆಂಗಿನ ತುರಿಯನ್ನು ಬೆರೆಸಿಕೊಂಡು ಸ್ವಲ್ಪ ಸೆಕೆಂಡ್ ಬೇಯಿಸಿಕೊಳ್ಳಿ. ಕುದಿಸಿದ ಹಾಲನ್ನು ಹಾಕಿ ಮತ್ತು ಸಕ್ಕರೆ ಬೆರೆಸಿಕೊಂಡು ಚೆನ್ನಾಗಿ ಎಲ್ಲವನ್ನೂ ಕಲಸಿಕೊಳ್ಳಿ. ಕೋಯಾವನ್ನು ಹಾಕಿ ಮತ್ತು ಕತ್ತರಿಸಿದ ನಟ್ಸ್ ಈಗ ಮಿಶ್ರ ಮಾಡಿಕೊಳ್ಳಿ. ಪ್ಯಾನ್ನಲ್ಲಿ ಚೆನ್ನಾಗಿ ಇದೆಲ್ಲವನ್ನೂ ಕಲಸಿಕೊಳ್ಳಿ.ಈಗ ಚಪ್ಪಟೆ ಟ್ರೇಯನ್ನು ತೆಗೆದುಕೊಂಡು ತುಪ್ಪವನ್ನು ಸರಿಯಾಗಿ ಹಚ್ಚಿ. ಈ ಮಿಶ್ರಣವನ್ನು ಸಂಪೂರ್ಣವಾಗಿ ಟ್ರೇಗೆ ಹಾಕಿ ಮತ್ತು ತಣ್ಣಗಾಗಲು ಬಿಡಿ. ಬರ್ಫಿ ಆಕಾರದಲ್ಲಿ ಇದನ್ನು ಕತ್ತರಿಸಿಕೊಳ್ಳಿ ನಂತರ ಸೂರ್ಯಕಾಂತಿ ಬೀಜ, ಮೆಲನ್ ಬೀಜ ಮತ್ತು ನಟ್ಸ್ನಿಂದ ಅಲಂಕರಿಸಿ. ನಂತರ ಫ್ರಿಡ್ಜ್ನಲ್ಲಿರಿಸಿ ಇನ್ನಷ್ಟು ರುಚಿ ಬರಿಸಿಕೊಳ್ಳಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು