ಪಾವ್ ಬಾಜಿ ಅಂದ್ರೆ ಎಲ್ಲರಿಗೂ ಇಷ್ಟಾನೇ..ಆದ್ರೆ ಚಾಟ್ಸ್ ಅಂಗಡಿಗೆ ಹೋಗಿ ತಿನ್ನೋದು ಸ್ವಲ್ಪ ಕಿರಿಕಿರಿ ಅಂತ ಅನಿಸುತ್ತೆ ಅಲ್ವಾ..ಅದಕ್ಕೇನೆ ನೀವು ಒಂದ್ಸಲ ಮನೆಯಲ್ಲೇ ಪಾವ್ ಬಾಜಿ ಮಾಡಿ ನೋಡಿ. ಮಾಡೋದಂತೂ ತುಂಬಾ ಸಿಂಪಲ್..
ಬೇಕಾಗುವ ಸಾಮಗ್ರಿಗಳು
ಕ್ಯಾರೆಟ್
ಟೊಮೇಟೊ
ಬೇಯಿಸಿದ ಆಲೂಗಡ್ಡೆ
ಪಾವ್ ಬಾಜಿ ಮಸಾಲಾ
ಶುಂಠಿ & ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲಾ
ಖಾರದ ಪುಡಿ
ಎಣ್ಣೆ
ತುಪ್ಪ
ಈರುಳ್ಳಿ
ಬೀನ್ಸ್
ಅರಿಶಿನ
ನಿಂಬೆರಸ
ಉಪ್ಪು
ಮಾಡುವ ವಿಧಾನ
ಒಂದು ಬಾಣಲೆಗೆ ಎಣ್ಣೆ, ತುಪ್ಪವನ್ನು ಹಾಕಿ ಅದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಬೇಯಿಸಿ. ಬಳಿಕ ಅದಕ್ಕೆ ಬೇಯಿಸಿದ ಬೀನ್ಸ್, ಕ್ಯಾರೆಟ್, ಟೊಮೇಟೊ, ಉಪ್ಪು, ಅರಿಶಿನ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮಸಾಲಾ ಪುಡಿ, ಖಾರದ ಪುಡಿ, ಪಾವ್ ಬಾಜಿ ಮಸಾಲಾ ಪುಡಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದಕ್ಕೆ ಬೇಯಿಸಿದ ಆಲೂಗಡ್ಡೆ ಹಾಕಿ ಚೆನ್ನಾಗಿ ಕೈಯಾಡಿಸಿ 2-3 ನಿಮಿಷ ಕುದಿಸಿ. ಇನ್ನೊಂದು ಕಡೆ ತವಾ ಮೇಲೆ ತುಪ್ಪ ಹಾಕಿ ಬ್ರೆಡ್ ರೋಸ್ಟ್ ಮಾಡಿಕೊಳ್ಳಿ. ಪ್ಲೇಟ್ ಲ್ಲಿ ಪಾವ್ ಬಾಜಿ ಜತೆ ನಿಂಬೆಹೋಳನ್ನಿಟ್ಟು ಅಲಂಕರಿಸಿ. ಈಗ ಪಾವ್ ಬಾಜಿ ರೆಡಿ.