ಹೈದರಾಬಾದ್: ಒಲಿಂಪಿಕ್ಸ್ ಜಮ್ನಾಸ್ಟಿಕ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಸಾಧನೆನೆಗೈದಿರುವ ದೀಪಾ ಕರ್ಮಾಕರ್ ಗೆ ಉಡುಗೊರೆಯಾಗಿ ಹೈದರಾಬಾದಿನ ಬಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷರು ನೀಡಿದ್ದ ಐಷಾರಾಮಿ ಕಾರನ್ನು ವಾಪಾಸ್ ನೀಡಲು ನಿರ್ಧರಿಸಿದ್ದಾರೆ.
ಭಾರತೀಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ತಮ್ಮ ಚೊಚ್ಚಲ ಒಲಿಂಪಿಕ್ಸ್ ನ ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದರು. ದೀಪಾ ಸವರ ಸಾಧನೆಗೆ ಮೆಚ್ಚಿ ಹೈದರಾಬಾದಿನ ಬಾಡ್ಮಿಂಟನ್ ಅಸೋಸಿಯೇಷನ್ (ಎಚ್ ಬಿಎ) ನ ಅಧ್ಯಕ್ಷ ವಿ ಚಾಮುಂಡೇಶ್ವರನಾಥ್ ಅವರು ಬಿಎಂಡಬ್ಲ್ಯೂ ಕಾರನ್ನು ಉಡಗೊರೆಯಾಗಿ ನೀಡಿದ್ದರು. ಇದೀಗ ಕಾರನ್ನು ವಾಪಾಸ್ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಐಷಾರಾಮಿ ಕಾರು ಹಿಂತಿರುಗಿಸುತ್ತಿರುವುದೇಕೆ ಎಂಬುದರ ಬಗ್ಗೆ ದೀಪಾ ಬಾಯ್ಬಿಟ್ಟಿಲ್ಲ. ಆದರೆ, ಆಪ್ತ ವರ್ಗದವರ ಪ್ರಕಾರ, ದೀಪಾ ಅವರಿಗೆ ಈ ಐಷಾರಾಮಿ ಕಾರನ್ನು ನಿಭಾಯಿಸಲು ಕಷ್ಟವಾಗುತ್ತದೆ.ಅಗರ್ತಲಾದಂಥ ಸಣ್ಣ ನಗರದಲ್ಲಿ ಇಂಥ ಕಾರನ್ನು ಇಟ್ಟುಕೊಂಡು ನಿಭಾಯಿಸುವುದು ಕಷ್ಟ ಎಂದಿದ್ದಾರೆ.