ಊಟಕ್ಕೆ ಸಾರು ಇಲ್ಲದಿದ್ದರೆ ಊಟ ಪೂರ್ತಿಯಾದಂತೆ ಅನುಭವವಾಗುವುದಿಲ್ಲ. ಎಷ್ಟೇ ಮೃಷ್ಟಾನ್ನ ಭೋಜನವಿದ್ದರೂ ಸಾರು ಇಲ್ಲದ ಊಟ ಅಪೂರ್ಣ ಎನಿಸಿಬಿಡುತ್ತದೆ. ಸುಲಭವಾಗಿ ಸಾರು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು :
• ತೊಗರಿ ಬೇಳೆ – 150 ಗ್ರಾಂ
• ಹುಣಸೆ ಹಣ್ಣು – ಮಧ್ಯಮ ಗಾತ್ರದ ಒಂದು ಉಂಡೆ
• ಬೆಲ್ಲ – 50 ಗ್ರಾಂ
• ಹಸಿಮೆಣಸಿನಕಾಯಿ – 4
• ಹಸಿಶುಂಠಿ – 1 ತುಂಡು
• ಕರಿಬೇವು – 2 ಕಡ್ಡಿ
• ತುಪ್ಪ / ಎಣ್ಣೆ – 2 ಚಮಚ
• ಒಣಮೆಣಸು – 1
• ರುಚಿಗೆ ತಕ್ಕಷ್ಟು ಉಪ್ಪು
• ಅರಶಿನ ಪುಡಿ ಒಂದು ಚಿಟಿಕೆ
• ಸಾಸಿವೆ – 1/2 ಚಮಚ
• ಟೋಮ್ಯಾಟೊ – 1
ಮಾಡುವ ವಿಧಾನ :
ಕುಕ್ಕರ್ನಲ್ಲಿ ಎಣ್ಣೆ ಇಟ್ಟು ಅದಿಕ್ಕೆ. ಸಾಸಿವೆ, ಒಣಮೆಣಸು, ಕರಿಬೇವು, ಹಸಿಮೆಣಸು, ಶುಂಠಿ, ಟೊಮ್ಯಾಟೋ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ತೊಳೆದಿಟ್ಟ ತೊಗರಿ ಬೇಳೆಯನ್ನ ಅದಕ್ಕೆ ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಿ. ಅದಕ್ಕೆ ಬೇಕಾಗುವಷ್ಟು ನೀರು ಬೆರೆಸಿ, ಜೊತೆಗೆ ಒಂದು ಚಿಟಿಕೆ ಅರಶಿನ, ಬೆಲ್ಲ, ರುಚಿಗೆ ಬೇಕಾಗುವಷ್ಟು ಉಪ್ಪು ಹಾಗೂ ಹುಣಸೆ ಹಣ್ಣಿನ ರಸವನ್ನು ಸೇರಿಸಿ ಕುಕ್ಕರ್ನ ಮುಚ್ಚಳ ಮುಚ್ಚಿ 5 ಸೀಟಿ ಕೂಗಿಸಿದರೆ ಸಾದಾ ಸಾರು ತಯಾರಾಗುತ್ತದೆ, ತೊಗರಿ ಬೇಳೆಯನ್ನು ಮೊದಲೆ ನೆನೆ ಹಾಕಿದ್ದರೆ ಕುಕ್ಕರ್ನಲ್ಲಿ 3 ಸೀಟಿ ಸಾಕಾಗುತ್ತದೆ.