ತಂಬುಳಿಯನ್ನು ಸಾಮಾನ್ಯವಾಗಿ ಎಲ್ಲ ರೀತಿಯ ತರಕಾರಿಗಳಿಂದಲೂ ಮಾಡಲಾಗುತ್ತದೆ. ಅಲ್ಲದೆ ಒಂದೊಂದು ತರಕಾರಿಯಿಂದ ಮಾಡಿದ ತಂಬುಳಿ ಒಂದೊಂದು ರೀತಿಯ ರುಚಿಯನ್ನು ಹೊಂದಿರುತ್ತದೆ. ಈ ಪೈಕಿ ಮಾವಿನಕಾಯಿಯ ತಂಬುಳಿಯೂ ಒಂದಾಗಿದ್ದು, ಇದನ್ನು ಮಾಡುವುದು ಬಹು ಸುಲಭವಾಗಿದೆ.
ಮಾವಿನಕಾಯಿ ತಂಬುಳಿಗೆ ಬೇಕಾಗುವ ಪದಾರ್ಥಗಳು
ಮಾವಿನಕಾಯಿ-1
ಮೊಸರು- ಒಂದು ಬಟ್ಟಲು
ಒಣ ಮೆಣಸು- 4ರಿಂದ5
ಕಾಯಿತುರಿ- ಅರ್ಧ ಬಟ್ಟಲು
ಇಂಗು- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು_ ಸ್ವಲ್ಪ
ಮಾಡುವ ವಿಧಾನ ಹೀಗಿದೆ..
ಮೊದಲಿಗೆ ಮಾವಿನ ಕಾಯಿ ಮತ್ತು ಕಾಯಿಯನ್ನು ತುರಿದಿಟ್ಟುಕೊಳ್ಳಬೇಕು. ಬಳಿಕ ಮಾವಿನಕಾಯಿ ಹಾಗೂ ಕಾಯಿತುರಿಯೊಂದಿಗೆ ಉಪ್ಪು, ಇಂಗು, ಒಣಮೆಣಸು ಎಲ್ಲವನ್ನು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಬೇಕು. ಆನಂತರ ಅದನ್ನು ಮೊಸರಿನೊಂದಿಗೆ ಮಿಕ್ಸ್ ಮಾಡಬೇಕು ಆ ನಂತರ ಕೊತ್ತಂಬರಿ ಸೊಪ್ಪನ್ನು ಅದರ ಮೇಲೆ ಉದುರಿಸಿದರೆ ಮಾವಿನ ಕಾಯಿ ತಂಬುಳಿ ಸಿದ್ದವಾಗಲಿದೆ.