ಉದ್ದಿನ ವಡೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಇಡ್ಲಿ ಜೊತೆ ಜೊತೆ ಬಿಸಿಬಿಸಿ ಆದ ಉದ್ದಿನ ವಡೆ ಇದ್ದರೆ ಬೆಳಗಿನ ತಿಂಡಿ ಪರಿಪೂರ್ಣ ಎನ್ನಬಹುದು. ಎಷ್ಟೋ ಸಲ ನಾವು ಉದ್ದಿನ ವಡೆ ಮಾಡಲು ಹೋಗಿ ಹೋಟೆಲ್ ರೀತಿ ಬರದೇ ನಿರಾಸೆಯಾಗುವುದು ಉಂಟು. ಉದ್ದಿನ ವಡೆಯನ್ನು ಈ ಕೆಳಗೆ ಹೇಳಿದ ಕ್ರಮದಲ್ಲಿ ಮಾಡಿದರೆ ಹೋಟೆಲ್ ತಿಂಡಿಯನ್ನು ಮರೆತು ಬಿಡಬಹುದು.
ಉದ್ದಿನ ವಡೆಗೆ ಬೇಕಾಗುವ ಸಾಮಗ್ರಿಗಳು :-
1. ಉದ್ದಿನ ಬೆಳೆ 1 ಕಪ್
2. ಅಕ್ಕಿ ಹಿಟ್ಟು 2 ಚಮಚ
3. ಮೆಣಸಿನಕಾಯಿ 2
4. ಕೊಬ್ಬರಿ ಚೂರು 2 ಚಮಚ
5. ಕಾಳು ಮೆಣಸು 1/2 ಚಮಚ
6. ಕರಿಬೇವು 2 ಕಡ್ಡಿ
7. ಕೊತ್ತಂಬರಿ ಸ್ವಲ್ಪ
8. ಉಪ್ಪು ರುಚಿಗೆ ತಕ್ಕಷ್ಟು
9. ಎಣ್ಣೆ ಕರೆಯಲು
ಮಾಡುವ ವಿಧಾನ
ಮೊದಲಿಗೆ ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು ಕನಿಷ್ಠ 4 ಗಂಟೆಗಳ ಕಾಲ ನೆನೆಯಲು ಬಿಡಿ. ಉದ್ದಿನ ಬೆಳೆ ಬೆಂದ ಮೇಲೆ ಅದನ್ನು ಮಿಕ್ಸಿಗೆ ಹಾಕಿ ನೀರು ಹಾಕದೆ ಸಣ್ಣಗೆ ರುಬ್ಬಿಕೊಳ್ಳಿ. ನಂತರ ಆ ಹಿಟ್ಟಿಗೆ 2 ಚಮಚ ಅಕ್ಕಿ ಹಿಟ್ಟು, ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ, ಕೊಬ್ಬರಿ ಚೂರು, ಕಾಳು ಮೆಣಸು, ಸಣ್ಣಗೆ ಕತ್ತರಿಸಿದ ಕರಿಬೇವು, ಕೊತ್ತಂಬರಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಚೆನ್ನಾಗಿ ಕಲಸಿ ಇಡಿ.
ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ, ಎಣ್ಣೆ ಕಾದ ನಂತರ ಕೈಯಿಗೆ ನೀರು ಸವರಿ ಒಂದು ನಿಂಬೆ ಹಣ್ಣು ಗಾತ್ರದ ಹಿಟ್ಟನ್ನು ತೆಗೆದುಕೊಂಡು ಉಂಡೆ ಆಕಾರ ಮಾಡಿ ಅದರ ಮಧ್ಯ ಸ್ವಲ್ಪ ಒತ್ತಿ ಎಣ್ಣೆಯಲ್ಲಿ ಕರೆದರೆ ಬಿಸಿ- ಬಿಸಿಯಾದ ಉದ್ದಿನ ವಡೆ ಸವಿಯಲು ಸಿದ್ಧ.