ಚುಮು ಚುಮು ಮಳೆಯಲಿ ಸಂಜೆ ಟೀ ಅಥವಾ ಕಾಫಿಯೊಂದಿಗೆ ರುಚಿಕರವಾದ ಮಸಾಲ ಪಾಪಡ್ ಇದ್ದರೆ ಎಷ್ಟು ಚೆನ್ನ , ಬನ್ನಿ ಹಾಗಾದರೆ ಮಸಾಲ ಪಾಪಡ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಮಸಾಲ ಪಾಪಡ್ ಗೆ ಬೇಕಾಗುವ ಸಾಮಗ್ರಿಗಳು
1. ಉದ್ದಿನ ಹಪ್ಪಳ ( ದೊಡ್ಡ ಗಾತ್ರದ್ದು )
2. ಈರುಳ್ಳಿ 1
3. ಟೊಮೆಟೊ 1
4. ಮೆಣಸಿನಕಾಯಿ 2
5. ಕಾಳು ಮೆಣಸಿನ ಪುಡಿ 1/4 ಚಮಚ
6. ಚಾಟ್ ಮಸಾಲ 1/2 ಚಮಚ
7. ಸೇವ್ 2 ಚಮಚ
8. ಉಪ್ಪು
9. ಕರೆಯಲು ಎಣ್ಣೆ
ಮಸಾಲ ಪಾಪಡ್ ಮಾಡುವ ವಿಧಾನ :-
ಮೊದಲಿಗೆ ಒಂದು ದೊಡ್ಡ ಗಾತ್ರದ ಉದ್ದಿನ ಹಪ್ಪಳವನ್ನು ಎಣ್ಣೆಯಲ್ಲಿ ಕರಿಯಬೇಕು. ನಂತರ ಅದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ , ಮೆಣಸಿನಕಾಯಿ ಹಾಗೂ ಟೊಮೆಟೊವನ್ನು ಹರಡಬೇಕು ನಂತರ ಅದರ ಮೇಲೆ ಕಾಲು ಚಮಚ ಕಾಳು ಮೆಣಸಿನ ಪುಡಿ, ಅರ್ಧ ಚಮಚ ಚಾಟ್ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಉದುರಿಸಬೇಕು ಕೊನೆಗೆ ಸ್ವಲ್ಪ ಸೇವ್ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಮಸಾಲ ಪಾಪಡ್ ಸವಿಯಲು ಸಿದ್ಧ.