ಬೆಂಗಳೂರು: ಉಪೇಂದ್ರ ನಿರ್ದೇಶನ ಮಾಡಿ ನಟಿಸುತ್ತಿರುವ ಯುಐ ಸಿನಿಮಾದ ಟೀಸರ್ ಇಂದು (ಜ.8) ಬಿಡುಗಡೆ ಆಗಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಬಿಡುಗಡೆ ಸಮಾರಂಭಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್, ಶಿವರಾಜ್ ಕುಮಾರ್ ಸೇರಿದಂತೆ ಹಲವರು ಕಾರ್ಯಕ್ರಮಲ್ಲಿ ಭಾಗಿಯಾಗಿದ್ದಾರೆ. ನಟ ಶಿವರಾಜ್ ಕುಮಾರ್ ಟೀಸರ್ ರಿಲೀಸ್ ಮಾಡಿದ್ದಾರೆ.
ಡಿಜಿಟಲ್ ಮೂಲಕ ಕಿಚ್ಚ ಸುದೀಪ್ ಕೂಡ ಯುಐ ಸಿನಿಮಾದ ಟೀಸರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಟೀಸರ್ ರಿಲೀಸ್ ಮಾಡಿದ್ದಾರೆ. ರಿಲೀಸ್ ಆಗಿರುವ ಟೀಸರ್ ಹೊಸ ಆಲೋಚನೆಯನ್ನು ಬಿತ್ತಲಿದೆ. ಈಗಾಗಲೇ ರಿಲೀಸ್ ಆಗಲಿರೋ ಟೀಸರ್ ನಲ್ಲಿ ಉಪ್ಪಿ ಕಲಿಯುಗದ ಕಥೆ ಹೇಳ್ತಿರೋ ಹಾಗಿದೆ.